More

    ಬಿಎಸ್‌ವೈ ಮಗನಾಗಿದ್ದರೆ ನಾನು ಶಾಸಕನಾಗುತ್ತಿದ್ದೆ: ಕುಂ.ವೀರಭದ್ರಪ್ಪ

    ಶಿಕಾರಿಪುರ: ರಾಜಕಾರಣ ಮತ್ತು ಸಾಹಿತ್ಯ ಬೇರೆ ಬೇರೆ ಅಲ್ಲ. ವನ ಮತ್ತು ಹುಲಿ ಅನ್ಯೋನ್ಯವಾಗಿದ್ದರೆ ಇಬ್ಬರೂ ಕ್ಷೇಮವಾಗಿರುತ್ತಾರೆ. ಸಾಹಿತ್ಯ, ರಾಜಕಾರಣ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.
    ಶನಿವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ, ಜಾನಪದ ಪರಿಷತ್, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿಕ್ಷಕ ಪಾಪಯ್ಯ ಅವರ ಜನುಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ದಮನಿತರ ದನಿ ಪಾಪಯ್ಯ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
    ಸಾಹಿತಿ ರಾಜಕಾರಣಿ ಆಗಬಾರದೆಂದೇನೂ ಇಲ್ಲ. ನನಗೂ ಶಾಸಕನಾಗಲು ಆಸೆ. ಯಡಿಯೂರಪ್ಪ ಅವರ ಹೊಟ್ಟೆಯಲ್ಲಿ ಹುಟ್ಟಿದ್ದರೆ ನಾನೂ ಶಾಸಕನಾಗುತ್ತಿದ್ದೆ ಎಂದು ವ್ಯಂಗ್ಯವಾಡಿದರು.
    ನಾವೆಲ್ಲರೂ ಸಂವಿಧಾನದ ಫಲಾನುಭವಿಗಳು. ದಮನಿತರಿಗೆ ಸಮಾಜವಾಹಿನಿಯಲ್ಲಿ ಪ್ರವೇಶ ನೀಡಿದ್ದು ಸಂವಿಧಾನ, ಅಂತಹ ಸಂವಿಧಾನವನ್ನೇ ಬದಲಿಸುತ್ತೇನೆ, ರಾಷ್ಟ್ರ ಧ್ವಜ ಬದಲಿಸುತ್ತೇನೆ ಎನ್ನುವುದು ನಡೆಯುವುದಿಲ್ಲ ಎಂದು ಹೇಳಿದರು.
    ಈಗ ತಳ ಸಮುದಾಯ ಪ್ರಜ್ಞಾವಂತರು, ಪ್ರತಿಭಾನ್ವಿತರನ್ನು ಸೃಷ್ಟಿಸುತ್ತಿದೆ. ಎಲ್ಲ ರಂಗಗಳಲ್ಲಿ ತಳ ಸಮುದಾಯದವರು ವಿಜೃಂಭಿಸುತ್ತಿರುವದು ಅತ್ಯಂತ ಸಂತಸದ ಸಂಗತಿ ಎಂದರು.
    ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಕ್ಷಕ ಬಿ.ಪಾಪಯ್ಯ, ಪಿ.ಆರ್.ಪವಿತ್ರಾ, ಡಾ.ವಂದನೀಯ ಸ್ವಾಮಿ ಸಂತೋಷ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts