More

    ಬಿಎಸ್ವೈ ಜನ್ಮ ದಿನ ವಿಶೇಷ ಪೂಜೆ

    ಬೀದರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 77ನೇ ಜನ್ಮ ದಿನದ ನಿಮಿತ್ತ ಗುರುವಾರ ಬಿಜೆಪಿ ನಗರ ಘಟಕದಿಂದ ಇಲ್ಲಿಯ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆದವು.
    ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಪನಾಶ ಶಿವಲಿಂಗಕ್ಕೆ ವಿಶೇಷ ಪೂಜೆ, ಜಲಾಭಿಷೇಕ, ಕ್ಷೀರಾಭಿಷೇಕ ನೆರವೇರಿಸಿ ಯಡಿಯೂರಪ್ಪ ಅವರಿಗೆ ಶುಭ ಕೋರಿದರು. ನಂತರ ನಗರದ ಕಾಮತ್ ಹೋಟೆಲ್ ಹತ್ತಿರದ ಸಾಯಿ ನಗರದ ಸಾಯಿ ಬಾಬಾ ಮಂದಿರದಲ್ಲೂ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ಭಿಕ್ಷುಕರಿಗೆ ಬಟ್ಟೆ, ಹಣ್ಣು, ಬಿಸ್ಕಿಟ್ ವಿತರಿಸಲಾಯಿತು.
    ಜಿಲ್ಲಾಧ್ಯಕ್ಷ ಮಂಠಾಳಕರ್ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಯ ಹರಿಕಾರರು. ಅವರ ನೇತೃತ್ವದಲ್ಲಿ ರಾಜ್ಯ ಪ್ರಗತಿಪಥದತ್ತ ಸಾಗಿದೆ. ಎಲ್ಲ ಸಮಾಜ, ವರ್ಗದ ಹಿತದಿಂದ ದುಡಿಯುತ್ತಿದ್ದಾರೆ. ಭಗವಂತ ಅವರಿಗೆ ಜನರ ಸೇವೆಗೆ ಇನ್ನಷ್ಟು ಶಕ್ತಿ ನೀಡಲಿ, ಉತ್ತಮ ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿ ಸಲಾಗಿದೆ ಎಂದರು.
    ನಗರಾಧ್ಯಕ್ಷ ಹಣಮಂತ ಬುಳ್ಳಾ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕ್ಕೆ ಯಡಿಯೂರಪ್ಪ ಅವರು ವಿಶೇಷ ಕೊಡುಗೆ ನೀಡಿ ಈ ಭಾಗಕ್ಕೆ ವಿಕಾಸದತ್ತ ಒಯ್ಯುತ್ತಿದ್ದಾರೆ. ಅಧಿಕಾರಕ್ಕೆ ಬರುತ್ತಲೇ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದ್ದಾರೆ. ಅನುಭವ ಮಂಟಪಕ್ಕೆ ಅನುದಾನ ಸೇರಿ ಜಿಲ್ಲೆ ಸರ್ವಾಂಗೀ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಬಣ್ಣಿಸಿದರು.
    ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಬಾಬುರಾವ ಮದಕಟ್ಟಿ, ಉಪೇಂದ್ರ ದೇಶಪಾಂಡೆ, ರಾಜಕುಮಾರ ಪಾಟೀಲ್ ನೆಮತಾಬಾದ್, ನಾಗಶೆಟ್ಟಿ ವಗದಾಳೆ, ಬಸವರಾಜ ಜೋಜನಾ, ಎನ್.ಆರ್. ವರ್ಮಾ, ಮಹೇಶ ಪಾಲಂ, ಚಂದ್ರಶೇಖರ ಗಾದಾ, ನಾಗರಾಜ ಹುಲಿ, ದೇವೇಂದ್ರ ಎಮ್ಮೇಕರ್, ಮಹೇಶ್ವರ ಸ್ವಾಮಿ, ಕಲ್ಯಾಣರಾವ ಬಿರಾದಾರ, ಜಗದೀಶ ಬಿರಾದಾರ, ರಾಜು ಕೊಡ್ಡಿ, ಅಂಬರೀಶ್ ಬಟನಾಪುರೆ, ಅನೀಲಕುಮಾರ ರಾಜಗೀರಾ, ಸುನೀಲ ಗೌಳಿ, ದಿಲೀಪ ಗುಮ್ಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts