More

    ಬಾಳು ಹಜಾರೆಗೆ ಪ್ರಥಮ ಸ್ಥಾನ

    ನಿಪ್ಪಾಣಿ: ತಾಲೂಕಿನ ಬೆನಾಡಿ ಗ್ರಾಮದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬಡಿಗೆ ಹಾಗೂ ಬಾರಕೋಲು ರಹಿತ ಎತ್ತಿನ ಗಾಡಿ ಸ್ಪರ್ಧೆಯ ಜನರಲ್ ಎತ್ತಿನ ಗಾಡಿ ಸ್ಪರ್ಧೆಯ ಅ ವಿಭಾಗದಲ್ಲಿ ಶಿರೂರಿನ ಬಾಳು ಹಜಾರೆ ಪ್ರಥಮ ಸ್ಥಾನದೊಂದಿಗೆ 1,11,111 ರೂ. ಬಹುಮಾನ ಪಡೆದರು. ಪಾಚಗಾವ್‌ನ ಸಾಗರ ಪಾಟೀಲ ದ್ವಿತೀಯ ಸ್ಥಾನದೊಂದಿಗೆ 77,777 ರೂ. ಬಹುಮಾನ ಹಾಗೂ ಸರಾಟಿಯ ವಿಜಯ ಲೆಂಡಗೆ ತೃತೀಯ ಸ್ಥಾನ ಪಡೆದು 55,555 ರೂ. ಬಹುಮಾನ ಪಡೆದುಕೊಂಡರು.
    ಬ ವಿಭಾಗದಲ್ಲಿ ಅಂಬಾಜಿ ಶೇಳಕೆ ಪ್ರಥಮ ಸ್ಥಾನದೊಂದಿಗೆ 25 ಸಾವಿರ ರೂ. ಬಹುಮಾನ, ಬಂಡಾ ಖಿಲಾರೆ 20 ಸಾವಿರ ರೂ.ದೊಂದಿಗೆ ದ್ವಿತೀಯ ಸ್ಥಾನ ಹಾಗೂ ಅನಿಲ ಪುಣೇಕರ 15 ಸಾವಿರ ರೂ.ದೊಂದಿಗೆ ತೃತೀಯ ಸ್ಥಾನ ಪಡೆದರು.

    ಒಂದು ಕುದುರೆ ಒಂದು ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಪ್ರವೀಣ ಕದಂ 15 ಸಾವಿರ ರೂ. ಬಹುಮಾನದೊಂದಿಗೆ ಪ್ರಥಮ, ಬಾಳು ನಾಗಜ 10 ಸಾವಿರ ರೂ.ದೊಂದಿಗೆ ದ್ವಿತೀಯ ಹಾಗೂ 7ಸಾವಿರ ರೂ.ದೊಂದಿಗೆ ಹೇಮಂತ ಹರೇರ ತೃತೀಯ ಸ್ಥಾನ ಪಡೆದರು.

    ಹಲ್ಲಿಲ್ಲದ ಮತ್ತು ಎರಡು ಹಲ್ಲಿನ ಹೋರಿ ಗಾಡಿ ಸ್ಪರ್ಧೆಯಲ್ಲಿ ಶ್ರೀವರ್ಧನ ನಾಗರಗೋಜೆ 15 ಸಾವಿರ ರೂ.ದೊಂದಿಗೆ ಪ್ರಥಮ, 10 ಸಾವಿರ ರೂ.ದೊಂದಿಗೆ ಸಂತೋಷ ಪಾಡರೆ ದ್ವಿತೀಯ ಹಾಗೂ ಬಂಡಾ ವ್ಹನಮಿಸೆ 7 ಸಾವಿರ ರೂ.ದೊಂದಿಗೆ ತೃತೀಯ ಸ್ಥಾನ ಪಡೆದರು.

    ಕುದುರೆ ಗಾಡಿ ಸ್ಫರ್ಧೆಯ ಅ ವಿಭಾಗದಲ್ಲಿ 25 ಸಾವಿರ ರೂ. ಬಹುಮಾನದೊಂದಿಗೆ ಹರ್ಷವರ್ಧನ ಜಾಧವ ಪ್ರಥಮ, ಸಾಗರ ಗವಂಡಿ 20 ಸಾವಿರ ರೂ.ದೊಂದಿಗೆ ದ್ವಿತೀಯ, 15 ಸಾವಿರ ರೂ. ಬಹುಮಾನ ಪಡೆದ ಅಕ್ಷಯ ರಜಪೂತ ತೃತೀಯ. ಬ ವಿಭಾಗದಲ್ಲಿ ಲಗಮಣ್ಣ ಅಬ್ದುಲಾಟ 15 ಸಾವಿರ ರೂ. ಬಹುಮಾನದೊಂದಿಗೆ ಪ್ರಥಮ, 10 ಸಾವಿರ ರೂ.ದೊಂದಿಗೆ ಕಿಶೋರ ಪೂಜಾರಿ ದ್ವಿತೀಯ ಹಾಗೂ ಬಸಗೊಂಡ ಮುಖಮಾರ 7 ಸಾವಿರ ರೂ.ದೊಂದಿಗೆ ತೃತೀಯ ಸ್ಥಾನ ಪಡೆದರು.

    ವಿಜೇತರಿಗೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಗಣ್ಯರು ಬಹುಮಾನ ವಿತರಿಸಿದರು. ಈಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸಕ್ಕರೆ ಮಹಾಮಂಡಳಿಯ ಅಧ್ಯಕ್ಷ ವಿಶ್ವನಾಥ ಕಮತೆ, ಹಾಲಶುಗರ್ಸ್‌ ಕಾರ್ಖಾನೆ ಉಪಕಾರ್ಯಾಧ್ಯಕ್ಷ ಮಲಗೊಂಡ ಪಾಟೀಲ, ರಾಮಗೊಂಡ ಪಾಟೀಲ, ಸಮಿತ ಸಾಸನೆ, ಕಲ್ಲಪ್ಪ ನಾಯಿಕ, ಕಲಪ್ಪ ಜನವಾಡೆ, ಸುಭಾಷ ತಂಗಡೆ, ರಮೇಶ ಪಾಟೀಲ, ಪ್ರಕಾಶ ಶಿಂಧೆ, ಮಲಗೊಂಡ ಪಾಟೀಲ, ಸಿದ್ದು ನರಾಟೆ, ಸಿದ್ದೇಶ್ವರ ಪಾಟೀಲ, ರಾಜಶ್ರೀ ಪಾಟೀಲ, ಸಾಗರ ದೇಸಾಯಿ, ನಾಸೀರಖಾನ್ ಇನಾಂದಾರ, ಬಬನ್ ಹವಾಲ್ದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts