More

    ಬಾರದ ಬಸ್​ ಪ್ರಯಾಣಿಕರಿಗೆ ತ್ರಾಸ್​

    ಎಂ.ಕೆ.ಹುಬ್ಬಳ್ಳಿ: ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದಿಂದ ಬೆಳಗಾವಿಗೆ ತೆರಳಲು ತುರ್ತು ಸಮಯದಲ್ಲಿ ಸಾರಿಗೆ ಸೌಲಭ್ಯವಿಲ್ಲದ್ದರಿಂದ ಪ್ರಯಾಣಿಕರು ಕಾದು ಕಾದು ಸುಸ್ತಾಗುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿ ಆಕ್ರೋಶ ವ್ಯಕ್ತಪಡಿಸುವ ಪ್ರಯಾಣಿಕರಿಗೆ ಪ್ರತಿ 15 ನಿಮಿಷಕ್ಕೊಂದು ಬಸ್​ ಸೌಲಭ್ಯ ಕಲ್ಪಿಸಿರುವುದಾಗಿ ಬಿಳಿ ಹಾಳೆಯಲ್ಲಿ ಉತ್ತರ ರವಾನಿಸುವ ಧಾರವಾಡ ಸಾರಿಗೆ ಟಕದ ಅಧಿಕಾರಿಗಳು, ವಾಸ್ತವದಲ್ಲಿ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಹೀಗಾಗಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಂ.ಕೆ.ಹುಬ್ಬಳ್ಳಿಯಿಂದ ಬೆಳಗಾವಿ ಸೇರಿ ಮತ್ತಿತರ ಕಡೆಗೆ ತೆರಳುವ ಎಂ.ಕೆ.ಹುಬ್ಬಳ್ಳಿ, ಹೊಳಿಹೊಸುರ, ಗದ್ದಿಕರವಿನಕೊಪ್ಪ, ಕುರುಗುಂದ, ನೇಗಿನಹಾಳ, ಅಮರಾಪುರ, ವೀರಾಪುರ, ಕುಕಡೊಳ್ಳಿ, ಹಟ್ಟಿಹೊಳಿ, ಗಾಡಿಕೊಪ್ಪ ಸೇರಿ ವಿವಿಧೆಡೆಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತಾಸುಗಟ್ಟಲೇ ರಸ್ತೆ ಪಕ್ಕದಲ್ಲಿ ಚಾತಕ ಪಯಂತೆ ಬಸ್​ಗಾಗಿ ಕಾಯುವ ಸ್ಥಿತಿ ಎದುರಾಗಿದ್ದು, ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸದ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಗೊಂದು ಈಗೊಂದು ಬರುವ ಬಸ್​ಗಳಲ್ಲಿ ಕುರಿಗಳಂತೆ ಪ್ರಯಾಣಿಕರು ಜೋತು ಬಿದ್ದು ಸಾಗುತ್ತಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ&4ರ ಪಕ್ಕದಲ್ಲೇ ಇರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದಿಂದ ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ಕೇವಲ 30 ಕಿ.ಮೀ. ಅಂತರದಲ್ಲಿದೆ. ಪ್ರಯಾಣವೂ ಸಮಯವು 35 ರಿಂದ 40 ನಿಮಿಷ ಮಾತ್ರ. ಆದರೆ, ಅಗತ್ಯದ ವೇಳೆಯಲ್ಲಿ ಸಾರಿಗೆ ಬಸ್​ಗಳ ಸೌಲಭ್ಯವಿದ್ದರಿಂದ ಪ್ರತಿದಿನ ಬೆಳಗ್ಗೆ ವೇಳೆಯಲ್ಲಿ ಶಾಲಾ&ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ.

    ಧಾರವಾಡ ಕಡೆಯಿಂದ ಎರಡ್ಮೂರು ಬಸ್​ಗಳು ಬೆಳಗ್ಗೆ 8ಗಂಟೆ ತನಕ ಸಂಚರಿಸಿದರೆ, ಮತ್ತೆ ಬಸ್​ಗಳು ಬರುವುದು 9.30ಕ್ಕೆ. ಹೀಗಾಗಿ ಬಸ್​ಗಾಗಿ ನಾವು ಗಂಟೆಗಟ್ಟಲೇ ರಸ್ತೆಪಕ್ಕ ಕಾದು ಕೂರಬೇಕಾಗಿದೆ. 11 ಗಂಟೆಗೆ ಕಾಲೇಜಿಗೆ ತಲುಪುತ್ತಿರುವ ನಾವು, ಪ್ರತಿದಿನ ಒಂದು ವಿಷಯದ ಪಾಠ ತಪ್ಪಿಸಿಕೊಳ್ಳುವಂತಾಗಿದೆ. ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಿ ಬೆಳಗ್ಗೆ 8.30 ರಿಂದ 9ಗಂಟೆ ಅವಧಿಯಲ್ಲಿ ಬೆಳಗಾವಿ ಕಡೆಗೆ ಎರಡ್ಮೂರು ಬಸ್​ಗಳ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
    ಪಾಸ್​ ಕಂಡರೆ ಯಾಕೆ ತಾತ್ಸಾರ?.

    ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಜತೆಗೆ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಮುಂಗಡ ಪಾಸ್​ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಸಾವಿರಾರು ರೂ. ಮುಂಗಡ ಹಣ ಪಾವತಿಸಿ ಪಾಸ್​ ಪಡೆಯುವ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲದಂತಾಗಿದೆ. ಕೆಲ ಬಸ್​ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳ ಪಾಸ್​ ಕಂಡೊಡನೆ ತಾತ್ಸಾರ ಮಾಡುತ್ತಾರೆ. ನಮ್ಮ ಬಸ್​ನಲ್ಲಿ ಪಾಸ್​ ವಿದ್ಯಾರ್ಥಿಗಳು 5 ಅಥವಾ 10 ಜನ ಹತ್ತಬೇಕು. ಇನ್ನುಳಿದವರು ಕೆಳಗಿಳಿಯಿರಿ. ನಮ್ಮ ಬಸ್​ನಲ್ಲಿ ಪಾಸ್​ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಇಂತಹ ರ್ನಿಲಕ್ಷದ ಮಾತು ಕೇಳಿಬರುತ್ತಿವೆ. ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಕೇಳಿದರೆ, ಪಾಸ್​ ಪಡೆದ ವಿದ್ಯಾರ್ಥಿಗಳ ಪ್ರಯಾಣಕ್ಕೆ ವಿರೋಧ ವ್ಯಕ್ತಪಡಿಸದಂತೆ ಈಗಾಗಲೇ ನಮ್ಮ ಸಂಸ್ಥೆ ಸಿಬ್ಬಂದಿಗೆ ಸೂಚಿಸಿದ್ದೇವೆ. ಅಂತಹ ಟನೆ ನಡೆದರೆ ತಕ್ಷಣ ಗಮನಕ್ಕೆ ತನ್ನಿ ಎಂಬ ಉತ್ತರ ನೀಡುತ್ತಿದ್ದಾರೆ.

    ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ನಮ್ಮ ಟಕದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನೆರಡು ಬಸ್​ ಓಡಿಸುವ ಯೋಜನೆಯು ಇದೆ. ವಿದ್ಯಾರ್ಥಿಗಳ ಪಾಸ್​ಗೆ ತಾತ್ಸಾರ ತೋರುವ ಬಸ್​ ಚಾಲಕರ ಮತ್ತು ನಿರ್ವಾಹಕರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.
    | ಕೆ.ಕೆ.ಲಮಾಣಿ, ಡಿಟಿಒ ವಾ.ಕ.ರ.ಸಾರಿಗೆ ಸಂಸ್ಥೆ, ಬೆಳಗಾವಿ ಟಕ

    ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ನಮ್ಮ ಟಕದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನೆರಡು ಬಸ್​ ಓಡಿಸುವ ಯೋಜನೆಯು ಇದೆ. ವಿದ್ಯಾರ್ಥಿಗಳ ಪಾಸ್​ಗೆ ತಾತ್ಸಾರ ತೋರುವ ಬಸ್​ ಚಾಲಕರ ಮತ್ತು ನಿರ್ವಾಹಕರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.
    | ಕೆ.ಕೆ.ಲಮಾಣಿ, ಡಿಟಿಒ ವಾ.ಕ.ರ.ಸಾರಿಗೆ ಸಂಸ್ಥೆ, ಬೆಳಗಾವಿ ಟಕ

    |ಶಿವಾನಂದ ವಿಭೂತಿಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts