More

    ಬಾಪೂಜಿ ಹೈಟೆಕ್ ಎಜುಕೇಷನ್ ವಿದ್ಯಾರ್ಥಿಗಳ ಬೀಳ್ಕೊಡುಗೆ-  ಕೃಷಿ ಕ್ಷೇತ್ರ ಪ್ರವೇಶಕ್ಕೆ ದೊಡ್ಡ ಸಂಸ್ಥೆಗಳ ತವಕ- ಯೋಗೇಶ್-

    ದಾವಣಗೆರೆ: ಎಲ್ಲರೂ ನೌಕರಿ ಅರಸಿಕೊಂಡು ಹೋದರೆ ಆಹಾರವನ್ನು ಬೆಳೆದು ಕೊಡುವವರೇ ಇಲ್ಲವಾಗುತ್ತಾರೆ. ಈ ಸಂದಿಗ್ಧದಲ್ಲಿ ದೊಡ್ಡ ಸಂಸ್ಥೆಗಳು ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ತವಕಿಸುತ್ತಿವೆ ಎಂದು ಎಚ್ಡಿ ಎಫ್ಸಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಆರ್. ಯೋಗೇಶ ಹೇಳಿದರು.
    ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ವಿದಾಯ ಹೇಳುವ “ಬೀ ಐ ಹ್ಯಾವ್-2ಕೆ23” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಎಷ್ಟೇ ವಿದ್ಯಾವಂತರಾದರೂ ಕೃಷಿ ಕ್ಷೇತ್ರದ ಅನುಭವ ಅತ್ಯವಶ್ಯ, ಅದು ಪ್ರಕೃತಿಯೊಂದಿಗೆ ಬೆರೆತು ಬಾಳುವ ಬದುಕನ್ನು ತಿಳಿಸುತ್ತದೆ ಎಂದರು.
    ತಂತ್ರಜ್ಞಾನದ ತೀವ್ರಗತಿಯ ವೃದ್ಧಿಯು ಕೆಲಸದ ವಿಧಾನಗಳಲ್ಲೂ ಬದಲಾವಣೆ ಉಂಟುಮಾಡುತ್ತಿದೆ. ಇದು ಮಾರುಕಟ್ಟೆಯ ವ್ಯವಸ್ಥೆಯಲ್ಲೂ ಬಳಕೆದಾರರ ಅಭಿರುಚಿಯಲ್ಲೂ ತೀವ್ರ ಬದಲಾವಣೆ ತರುತ್ತಿದೆ, ಇವುಗಳ ಅರಿವು ಅನುಷ್ಠಾನ ದೊಂದಿಗೆ ಶಿಸ್ತು,ಸಮಯ ಪಾಲನೆ,ಸಮಾಜ ಗೌರವ ಇದ್ದವರು ಮಾತ್ರ ಯಶಸ್ವಿ ಉದ್ಯೋಗಿಗಳಾಗಲು ಸಾಧ್ಯ ಎಂದರು. ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಪ್ರಾಸ್ತಾವಿಕ ಮಾತನಾಡಿ ವಾಣಿಜ್ಯೋದ್ಯಮಗಳು ಆರ್ಥಿಕಾಭಿವೃದ್ಧಿಯ ಬೆನ್ನೆಲುಬುಗಳು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಅವಶ್ಯ ಎಂದರು.
    ಕಾಲೇಜಿನ ಪ್ರಾಚಾರ್ಯ ಡಾ.ಬಿ. ವೀರಪ್ಪ ಬಿಕಾಂ ಪದವಿಗೆ ಬೇಡಿಕೆ ಹೆಚ್ಚುತ್ತಿದೆ. ಪರೀಕ್ಷೆಯನ್ನು ಶ್ರದ್ಧೆಯಿಂದ ಸಂತೋಷದಿಂದ ಎದುರಿಸಿ ಪದವಿಯ ನಂತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ನೀಡಲಾಯಿತು.
    ಪ್ರಜ್ಞಾ ಪ್ರಾರ್ಥನಾಗೀತೆ ಹಾಡಿದರು. ಹರ್ಷಿತಾ ಮತ್ತು ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.ಬಿ. ಪವನ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts