More

    ಬಾಡಿಗೆ ನೀಡುವಂತೆ ನೋಟಿಸ್

    ಶಿರಸಿ: ಇಲ್ಲಿನ ನಗರಸಭೆ ತನ್ನ ವ್ಯಾಪ್ತಿಯ ಮಳೆಗೆಗಳ ಬಾಡಿಗೆ ನೀಡುವಂತೆ ಅಂಗಡಿಕಾರರಿಗೆ ನೋಟಿಸ್ ಜಾರಿ ಮಾಡಿದೆ.

    156 ಮಳಿಗೆಗಳನ್ನು ನಗರಸಭೆ ಬಾಡಿಗೆಗೆ ನೀಡಿದೆ. ಇದರಿಂದ ವಾರ್ಷಿಕ 58 ಲಕ್ಷ ರೂ. ಬಾಡಿಗೆ ಬರುತ್ತದೆ. ಇದರಲ್ಲಿ ಈ ಬಾರಿ 14-16 ಲಕ್ಷ ರೂ. ಬಾಡಿಗೆ ಮಾತ್ರ ವಸೂಲಿಯಾಗಿದೆ.

    ನಗರ ಸಭೆಯ ನೋಟಿಸ್ ತಲುಪಿದ ಮೂರು ದಿನದೊಳಗೆ ನಗರಸಭೆಗೆ ಮೊತ್ತ ಭರಣ ಮಾಡಿ ಪಾವತಿ ಪಡೆದುಕೊಳ್ಳಬೇಕು. ಮಳಿಗೆ ನೀಡುವಾಗ ಮುಚ್ಚಳಿಕೆ ಪ್ರಕಾರ ಮೂರು ತಿಂಗಳು ಬಾಡಿಗೆ ಹಣ ಭರಣ ಮಾಡದಿದ್ದಲ್ಲಿ ತಮಗೆ ನೀಡಿದ ಮಳಿಗೆಯನ್ನು ನಗರಾಡಳಿತದಿಂದ ಮುಟ್ಟುಗೊಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದೆ.

    ಈ ನಡುವೆ, ಲಾಕ್​ಡೌನ್, ಕರೊನಾ ಕಾರಣದಿಂದ 2- 3 ತಿಂಗಳು ಯಾವುದೇ ಅಂಗಡಿಯನ್ನೇ ತೆರೆದಿಲ್ಲ. ಮಾರ್ಚ್​ನಿಂದ ವ್ಯಾಪಾರವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಲಾಕ್​ಡೌನ್ ಅವಧಿಯ ಬಾಡಿಗೆ ವಿನಾಯಿತಿ ನೀಡಬೇಕು ಎಂದು ಅಂಗಡಿಕಾರ ಸದಾನಂದ ಭಂಡಾರಿ ಹಾಗೂ ಇತರ ಅಂಗಡಿಕಾರರು ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ರಮೇಶ ನಾಯಕ, ಅ.29ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ನೂತನ ಸಮಿತಿ ರಚನೆಯಾದ ನಂತರ ಏಪ್ರಿಲ್ ಹಾಗೂ ಮೇ ತಿಂಗಳ ಅಂಗಡಿ ಬಾಡಿಗೆ ವಿನಾಯಿತಿ ನೀಡುವಂತೆ ಬಾಡಿಗೆದಾರರು ಒತ್ತಾಯಿಸುತ್ತಿರುವುದನ್ನು ಸಭೆಯಲ್ಲಿ ಮಂಡನೆ ಮಾಡಿ ಆ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts