More

    ಬಹುತೇಕ ದೇವಾಲಯಗಳ ಜೀರ್ಣೋದ್ಧಾರ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಶಿವನ ಅನುಭಾವದ ಸುದಿನವೇ ಶಿವರಾತ್ರಿ. ಇಂದು ಜಗವೆಲ್ಲ ಶಿವ ನಾಮದ ಸುಗಂಧವೇ ಪಸರಿಸುತ್ತಿದೆ. ಇದೊಂದು ದೈವಾನುಗ್ರಹದ ರಾತ್ರಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಪಟ್ಟಣದ ತೇರುಬೀದಿಯ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ನೂತನ ಸಭಾಭವನ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿರುವ ವಿಶ್ವೇಶ್ವರ ಸ್ವಾಮಿಯನ್ನು ಹಿರಿಯರು ಲೋಕಕಲ್ಯಾಣಕ್ಕಾಗಿ ಕಾಶಿಯಿಂದ ತಂದು ಪ್ರತಿಷ್ಠಾಪಿಸಿದರಂತೆ. ಈ ದೇವಸ್ಥಾನಕ್ಕೆ ಅಗತ್ಯವಿದ್ದ ಸಭಾಭವನ ಈ ಸಮಾಜದ ಕನಸಾಗಿತ್ತು. ಅದು ನನಸಾಗಿದ್ದು ಶಿವರಾತ್ರಿಯ ದಿನವೇ ಲೋಕಾರ್ಪಣೆ ಆಗುತ್ತಿರುವುದು ಸಂತಸ ತಂದಿದೆ. ತಾಲೂಕಿನ ಬಹುತೇಕ ದೇವಾಲಯಗಳ ಜೀರ್ಣೋದ್ದಾರಕ್ಕೆ ಎಲ್ಲ ಸಮಾಜದ ಸಮುದಾಯ ಭವನಗಳಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರೂಪ್ಪ ಅನುದಾನ ನೀಡಿದ್ದಾರೆ ಎಂದರು.
    ಬ್ರಾಹ್ಮಣ ಸಮಾಜ ಅತ್ಯಂತ ಸಂಯಮ ಮತ್ತು ಸ್ನೇಹಮಯಿ ಸಮಾಜವಾಗಿದೆ ಮತ್ತು ಗುರು ಸ್ಥಾನದಲ್ಲಿ ನಿಂತು ಹಿಂದಿನ ಕಾಲದಿಂದಲೂ ಆಯಾ ಕಾಲಘಟ್ಟದಲ್ಲಿ ರಾಜ ಮಹಾರಾಜರು, ಚಕ್ರವರ್ತಿಗಳು, ಸಾಮಂತರಿಗೆ ಮಾರ್ಗದರ್ಶನ ಮಾಡುತ್ತ ಸಮಾಜದ ಉನ್ನತಿಗೆ ಶ್ರಮಿಸಿದೆ. ಸದಾ ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯದೊಂದಿಗೆ ಬದುಕು ಕಟ್ಟಿಕೊಂಡಿರುವ ಸಮಾಜವಾಗಿದೆ ಎಂದು ಹೇಳಿದರು.
    ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಅಭಿವೃದ್ಧಿ ಯ ಹರಿಕಾರರು ಧಾರ್ಮಿಕ ಚಿಂತನೆಗಳ ಸಾಕ್ಷಿರೂಪವಾಗಿರುವ ಯಡಿಯೂರಪ್ಪ ಅವರಿಗೆ ಈಗ 79 ವಸಂತಗಳು ತುಂಬಿ 80ನೇ ವಸಂತದ ಸಂಭ್ರಮ. ತಾಲೂಕಿನ ಮಹಾಜನತೆಯ ಆಶೀರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಆಡಳಿತದಿಂದ ಮತ್ತು ದೂರದೃಷ್ಟಿಯಿಂದ ಇಡೀ ಜಿಲ್ಲೆ ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ. ಎಂದಿಗೂ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಅದ್ಭುತ ಶಕ್ತಿಯಾಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts