More

    ಬಹಿರಂಗವಾಗಿ ಹಿಂದೂಗಳ ಕ್ಷಮೆಯಾಚಲಿ

    ಬಾಗಲಕೋಟೆ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಿಂದು ಪದ ಅಶ್ಲೀಲ ಎಂದು ಹೇಳಿಕೆ ಖಂಡಿಸಿ ಬಿಜೆಪಿ ಪಕ್ಷದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಹಿಂದೂ ಪದ ಕುರಿತು ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತಿಗೆ ಯಾರೂ ಮನ್ನಣೆಯನ್ನು ಕೊಟ್ಟಿಲ್ಲ. ಜಾರಕಿಹೊಳಿ ಸಾರ್ವಜನಿಕವಾಗಿ ಭಾರತೀಯ ಹಿಂದೂಗಳ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ತೊಂದರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೂ ಪದ ಕುರಿತು ಮಾತನಾಡುವ ದುರಂಹಕಾರದ ಮಾತುಗಳನ್ನಾಡುವುದು ರಾಜಕಾರಣಿಳಿಗೆ ಶೋಭೆ ತರುವುದಿಲ್ಲ ಎಂದರು.
    ಹಿಂದೂ ಎಂದರೆ ಅಶ್ಲೀಲ, ಪರ್ಶಿಯನ್ ಭಾಷೆಯಲ್ಲಿ ಹಿಂದೂ ಪದಕ್ಕೆ ಕೆಟ್ಟ ಅರ್ಥವಿದೆ ಎಂದು ಹೇಳಿಕೆ ನೀಡಿರುವುದು ಅವರ ಉದ್ಧಟತನದ ಪ್ರದರ್ಶನ. ಮೂಡನಂಬಿಕೆ ಬಗ್ಗೆ ಮಾತನಾಡುವುದು ಬೇರೆ, ಮೂಡನಂಬಿಕೆ ನಂಬುವಂತೆ ನಾವೂ ಹೇಳುವುದಿಲ್ಲ. ಹಿಂದೂ ಪದ ಮೂಡನಂಬಿಕೆ ಅಲ್ಲ. ಹಿಂದೂಸ್ಥಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಯಾರು ಇರಲು ಸಾಧ್ಯ. ದೇಶದ ಹೆಸರೇ ಹಿಂದೂಸ್ತಾನವಿದೆ. ತುಷ್ಟೀಕರಣದ ನೀತಿ, ಮತ ಬ್ಯಾಂಕ್ ಗಳಿಸಿಕೊಳ್ಳಲು ಮಾತನಾಡಿರುವುದು ಗಿಮಿಕ್ ಆಗಿದೆ. ಅನವಶ್ಯಕವಾಗಿ ಭಾರತದಲ್ಲಿರುವ ೧೧೦ ಕೋಟಿ ಜನ ಹಿಂದೂಗಳಿಗೆ ಅನ್ಯಾಯವಾಗುವ ರೀತಿ ಮಾತನಾಡಿವುದು ಖಂಡನೀಯ ಎಂದು ಕಿಡಿಕಾಡಿದರು.
    ಕಾಂಗ್ರೆಸ್ ಪಕ್ಷದವರು ಜಾರಕಿಹೊಳಿಯವರ ಹೇಳಿಕೆ ವೈಯಕ್ತಿಕ. ಅವರ ಹೇಳಿಕೆ ನಮಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಇಲ್ಲ. ಹಿಂದೂ ಪದ ಅವಹೇಳನಕಾರಿಯಾಗಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ನಾಯಕರಿಗೆ ಪರಿಣಾಮ ಗೊತ್ತಾಗಿದೆ ಎಂದು ಹೇಳಿದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬುಡಾ ಮಾಜಿ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾ ಅವರಾದಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಉಮೇಶ ಹಂಚಿನಾಳ, ಪ್ರದೀಪ್ ರಾಯ್ಕರ, ಶ್ರೀನಾಥ ಸಜ್ಜನ್, ಶಶಿಕಲಾ ಮಜ್ಜಗಿ, ಶೋಭಾ ರಾವ್, ರಾಜು ಗಾಣಿಗೇರ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts