More

    ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

    ಕುಶಾಲನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ನಿಲ್ಲಿಸಬೇಕೆಂದು ಒತ್ತಾಯಿಸಿ ಶನಿವಾರ ತೊರೆನೂರು ಗ್ರಾಮದಲ್ಲಿ ವಿದ್ಯಾರ್ಥಿಗಳು, ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.


    ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮದಲ್ಲಿ ಸಾರಿಗೆ ಬಸ್‌ಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಹಾಸನ-ಮಡಿಕೇರಿ ರಸ್ತೆಯಲ್ಲಿ ಓಡಾಡುವ ಎಲ್ಲ ಘಟಕಗಳ ಬಸ್‌ಗಳು ನಿಲುಗಡೆ ಮಾಡಿ ಸಹಕರಿಸಬೇಕು ಎಂದು ಕೊರವೇ ಅಧ್ಯಕ್ಷ ಸಾಗರ್ ತೊರೆನೂರು ಆಗ್ರಹಿಸಿದರು.
    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಬ್ಬಾಲೆ, ಶಿರಂಗಾಲ ಮತ್ತು ತೊರೆನೂರು ಗ್ರಾಮಗಳಲ್ಲಿ ಕೋರಿಕೆ ನಿಲುಗಡೆ ಎನ್ನುವ ಸೂಚನಾ ಫಲಕಗಳನ್ನು ಸಾರಿಗೆ ಇಲಾಖೆ ವತಿಯಿಂದ ಅಳವಡಿಸಬೇಕು. ಶಾಲೆ, ಕಾಲೇಜು ಆರಂಭ ಮತ್ತು ಬಿಡುವ ವೇಳೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಟಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.


    ಹೆಬ್ಬಾಲೆ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ಪುಟ್ಟ ನಾಯಕ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
    ತೊರೆನೂರು ಗ್ರಾಪಂ ಅಧ್ಯಕ್ಷೆ ರೂಪಾ ಮಹೇಶ್, ಸದಸ್ಯರಾದ ಶಿವಕುಮಾರ್, ಕೆ.ಬಿ.ದೇವರಾಜ್, ಸಾವಿತ್ರಿ, ಗ್ರಾಮಸ್ಥರಾದ ನರೇಂದ್ರನಾಥ್, ಟಿ.ಟಿ.ಪ್ರಕಾಶ್, ಕೃಷ್ಣೇಗೌಡ, ಕೊರವೇ ಹೆಬ್ಬಾಲೆ ಅಧ್ಯಕ್ಷ ಚಂದು ಪಾಟೀಲ್, ಕಣಿವೆಯ ಗಜೇಂದ್ರ, ಶಿರಂಗಾಲದ ಮಂಜುನಾಥ್ ಶೆಟ್ಟಿ, ತೊರೆನೂರು ಗ್ರಾಮಸ್ಥರು, ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.


    ಬೆಳಗ್ಗೆ ತೊರೆನೂರು ಗ್ರಾಮದಲ್ಲಿ ಕೊರವೇ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ವಿವರ ಪಡೆದ ಮಡಿಕೇರಿ ಸಾರಿಗೆ ಘಟಕದ ವ್ಯವಸ್ಥಾಪಕರು ತಕ್ಷಣ ಸ್ಪಂದಿಸಿ, ಬೆಳಗ್ಗೆ 8 ಗಂಟೆಯಿಂದ 9.30 ರ ತನಕ ಸಂಚರಿಸುವ ಸಾರಿಗೆ ಬಸ್‌ಗಳು ತೊರೆನೂರು, ಕಣಿವೆ, ಹುಲುಸೆ ಗ್ರಾಮಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿಲುಗಡೆ ಮಾಡಬೇಕೆಂದು ಲಿಖಿತ ರೂಪದಲ್ಲಿ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts