More

    ಬಸವ ತತ್ವದ ಶತ್ರು ಅಸಮಾನತೆ

    ಕಲಬುರಗಿ: ಬುದ್ಧನ ತರುವಾಯ ಬಸವಣ್ಣ ಹಾಗೂ ಶರಣರು ವೈದಿಕತೆಯನ್ನು ವಿರೋಧಿಸಿದರು. ಬಸವಣ್ಣನವರನ್ನು ಹಾಡಿ ಹೊಗಳುವ ಬದಲು ಅವರ ಕನಸು ನನಸು ಮಾಡಬೇಕು. ಅಸಮಾನತೆ ಬಸವ ತತ್ವದ ನಿಜವಾದ ಶತ್ರು ಎಂದು ಚಿತ್ರನಟ ಚೇತನ ಅಂಹಿಸಾ ಪ್ರತಿಪಾದಿಸಿದರು.

    ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟಿçÃಯ ಬಸವದಳ ಹಾಗೂ ಕಾಯಕ ಶರಣರ ಒಕ್ಕೂಟದ ಸಹಯೋಗದಲ್ಲಿ ನಗರದ ಜಗತ್ ವೃತ್ತದ ಬಳಿಯ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅನುಭಾವ ಗೋಷ್ಠಿಯಲ್ಲಿ ಮಾತನಾಡಿ, ಸ್ವತಂತ್ರ, ಭಿನ್ನ ಆಚರಣೆ, ವಿಭಿನ್ನ ಸಂಸ್ಕೃತಿ ಹೊಂದಿರುವ ಬಸವ ಧರ್ಮಕ್ಕೆ ಮಾನ್ಯತೆ ಕೊಡಿ. ಇಲ್ಲದಿದ್ದಲ್ಲಿ ಉಳಿದ ಧರ್ಮಗಳ ಮಾನ್ಯತೆ ರದ್ದು ಮಾಡಿ ಎಂದು ಆಗ್ರಹಿಸಿದರು.

    ಆರ್ಥಿಕ ಮರು ಹಂಚಿಕೆ ಮಾಡುವ ಮೂಲಕ ವಂಚಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ರಾಜಕೀಯ, ಆರ್ಥಿಕ ಕ್ಷೇತ್ರದಲ್ಲೂ ಸಮಾನ ಅವಕಾಶ ಕಲ್ಪಿಸಬೇಕು. ದೇಶ ಎಂದರೆ ಒಂದು ಕಲ್ಪನೆ. ಹಿಂದು ನಾವೆಲ್ಲ ಒಂದು ಎಂಬ ಸುಳ್ಳು ಬ್ರಹ್ಮೆ ಸೃಷ್ಟಿಸಲಾಗುತ್ತಿದೆ. ಜಾತಿ, ಭಾಷೆ, ಲಿಂಗ, ಅಧ್ಯಾತ್ಮ, ಸಾಮಾಜಿಕ ಮುಂತಾದ ತಾರತಮ್ಯವಿದ್ದು, ಬಸವವಾದಿಗಳು ಸತ್ಯಮಾರ್ಗದವರು ಎಂದು ಹೇಳಿದರು.

    ಶಾಸಕ ಅಲ್ಲಮಪ್ರಭು ಪಾಟೀಲï ಮಾತನಾಡಿ, ಬಸವ ಜಯಂತಿ ದಿನಕ್ಕೆ ಸೀಮಿತ ಮಾಡದೇ ಅವರ ತತ್ವ ಪೀಳಿಗೆಗೆ ತಲುಪಬೇಕು. ಕನ್ನಡ ನಾಡಿಗೆ ವಚನ ಸಾಹಿತ್ಯದ ಮೂಲಕ ಧರ್ಮ ದಾರಿ ತೋರಿದ ಬಸವಣ್ಣ. ಅನುಭವ ಮಂಟಪ ಕಟ್ಟಿ, ಕುಲಕೊಬ್ಬ ಶರಣರನ್ನು ಕೂಡಿಸಿದ್ದು ಬಸವಣ್ಣ. ರಾಜಕೀಯವಾಗಿ ಕೆಲಸ ಮಾಡದೆ ಕಾಯಕ ತತ್ವದ ಮೇಲೆ ದಾಸೋಹ, ಮೇಲು ಕೀಳು ದೂರ ಮಾಡಿದ್ದು ಬಸವಣ್ಣ ಎಂದರು.

    ಚಿಗರಳ್ಳಿ ಕ್ರಾಸ್ ಶ್ರೀ ಮರುಳಶಂಕರ ದೇವರ ಮಠದ ಸಿದ್ಧಬಸವ ಕಬಿರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತï ಸದಸ್ಯ, ಎಚ್ಕೆಇ ಸೊಸೈಟಿಯ ಅಧ್ಯP್ಷÀ ಶಶೀಲï ಜಿ. ನಮೋಶಿ, ಕಾಂಗ್ರೆಸ್ ಮುಖಂಡ ನೀಲಕಂಠ ಮೂಲಗೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾಯಕ ಶಿP್ಷÀಣ ಸಂಸ್ಥೆ ಅಧ್ಯಕ್ಷ ಶಿವರಾಜ ಪಾಟೀಲ್, ಸಂಗಮೇಶ ಮಹಾಗಾಂವಕರ್, ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ರಾಚೋಟಿ, ಎಸ್.ವಿ.ನಿಂಗಪ್ಪ, ಆರ್.ಜಿ.ಶೆಟಗಾರ, ಡಾ.ಶರಣಬಸಪ್ಪ ಹರವಾಳ, ಅಶೋಕ ಘೂಳಿ ಇತರರಿದ್ದರು. ಅನಿತಾ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts