More

    ಬನಶಂಕರಿದೇವಿ ಭವ್ಯ ರಥೋತ್ಸವ

     ಕಾಳಗಿ: ಪಟ್ಟಣದ ಶ್ರೀ ಬನಶಂಕರಿದೇವಿ ಜಾತ್ರೆ ನಿಮಿತ್ತ ಶುಕ್ರವಾರ ರಾತ್ರಿ ಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಭವ್ಯ ರಥೋತ್ಸವ ಜರುಗಿತು. ರಥೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಶಂಕ್ರಯ್ಯಸ್ವಾಮಿ ದೇವಾಂಗ ಮಠ ಅವರ ನೇತೃತ್ವದಲ್ಲಿ ದೇವಿ ಮೂತರ್ಿಗೆ ಮಹಾ ರುದ್ರಾಭಿಷೇಕ, ಧಾರಾಭಿಷೇಕ ಜರುಗಿತು.
    ಪಟ್ಟಣ ಸೇರಿ ವಿವಿಧ ಗ್ರಾಮದಿಂದ ಆಗಮಿಸಿದ ಭಕ್ತರು ದೇವಿಗೆ ವಿಶೇಷ ನೈವೇದ್ಯ ಅಪರ್ಿಸಿ ಪೂಜೆಗೈದರು. ದೇವಸ್ಥಾನದ ಅಂಗಳದಲ್ಲಿ ಮುತ್ತೈದಿಯರಿಗೆ ಉಡಿತುಂಬಲಾಯಿತು. ಸಂಜೆ ಗ್ರಾಮದ ಪ್ರಮುಖ ಮುಖಂಡರೊಂದಿಗೆ ಡೊಳ್ಳು, ಹಲಗೆ, ಭಾಜ, ಭಜಂತ್ರಿ, ವಾದ್ಯ ಮೇಳಗಳೊಂದಿಗೆ ಭಜನೆ ಮಾಡುತ್ತಾ ದೇವಾಂಗ ಮಠದಿಂದ ಕುಂಭ, ಕಳಶ ಹಾಗೂ ಪುರವಂತರನ್ನು ಕರೆದುಕೊಂಡು ಮೆರವಣಿಗೆ ದೇವಸ್ಥಾನ ತಲುಪಿತು.
    ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಉತ್ತತ್ತಿ, ನಾರು, ಬಾಳೆಹಣ್ಣು, ಹೂ, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು.
    ಶನಿವಾರ ಬೆಳಗ್ಗೆ ಬನಶಂಕರಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ದೇವಸ್ಥಾನದಿಂದ ಹೊರಟ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಭಾಜ, ಭಜಂತ್ರಿ, ವಾದ್ಯ, ಮೇಳ, ಭಜನೆಯೊಂದಿಗೆ ದೇವಸ್ಥಾನ ತಲುಪಿದ ನಂತರ ಜಾತ್ರೆ ಸಂಪನ್ನಗೊಂಡಿತು.
    ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಬಾಲಚಂದ್ರ ಕಾಂತಿ, ಅಧ್ಯಕ್ಷ ವೀರೇಶ ಕಣ್ಣಿ, ನಾಗಣ್ಣ ಟೆಂಗಳಿಕರ್, ರಾಮಣ್ಣ ಕಣ್ಣಿ, ಗಣಪತರಾವ ಸಿಂಗಶೆಟ್ಟಿ, ವೀರೇಶ ಸಿಗಂಶೆಟ್ಟಿ, ಮುಖಂಡರಾದ ಶಿವಶರಣಪ್ಪ ಕಮಲಾಪುರ, ಶರಣಗೌಡ ಪೊಲೀಸ್ ಪಾಟೀಲ್, ಶಿವಶರಣಪ್ಪ ಗುತ್ತೇದಾರ್, ರೇವಣಸಿದ್ಧ ಕಲಶೆಟ್ಟಿ, ಪಾಂಡುರಂಗ ಕಣ್ಣಿ, ರವಿ ಅಲ್ಲಾಪುರ, ಅಣವೀರಪ್ಪ ಸಿಂಗಶೆಟ್ಟಿ, ವೀರಣ್ಣ ಟೆಂಗಳಿ, ನಾಗರಾಜ ಟೆಂಗಳಿಕರ್, ಶ್ರೀನಿವಾಸ ಗುರಮಿಠಕಲ್, ವಿಠಲ್ ಗುರಮಿಠಲ್, ಪರಮೇಶ್ವರ ಟೆಂಗಳಿ, ವಿಜಯಕುಮಾರ ಅಲ್ಲಾಪುರ, ಕೃಷ್ಣ ಸಿಂಗಶೆಟ್ಟಿ, ಗಣೇಶ ಸಿಗಂಶೆಟ್ಟಿ, ವಾಸುದೇವ ಕಣ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts