More

    ಬನವಾಸಿ ಮಧುಕೇಶ್ವರ ದೇವಸ್ಥಾನ ಪರಿಶೀಲನೆ

    ಶಿರಸಿ: ಇತಿಹಾಸ ಪ್ರಸಿದ್ಧ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯ ಸಂಪೂರ್ಣವಾಗಿ ಸೋರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮಧುಕೇಶ್ವರ ದೇವಸ್ಥಾನದ ಗರ್ಭ ಗುಡಿ, ಸಂಕಲ್ಪ ಮಂಟಪ, ಆದಿ ಮಾದವ, ಗಂಟಾ ಮಂಟಪ, ನೃತ್ಯ ಮಂಟಪ, ಕೂಡುವ ಆಸನಗಳ ಮೇಲೆ, ಬಸವನ ಸುತ್ತ, ಇನ್ನುಳಿದ ಪ್ರಾಕಾರದಲ್ಲಿರುವ ದೇವಸ್ಥಾನ ಸೋರಿಕೆ ಬಗ್ಗೆ ವಿಜಯವಾಣಿ ಜುಲೈ 10ರಂದು ‘ಮಧುಕೇಶ್ವರನಿಗೆ ಮಳೆನೀರ ಅಭಿಷೇಕ!’ ಎಂಬ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು.

    ಇಲಾಖೆಯ ಹಾವೇರಿ ಉಪ ವಿಭಾಗದ ಹಿರಿಯ ಸಂರಕ್ಷಣೆ ಅಧಿಕಾರಿ ಎಂ. ಬಿ. ವಿಜಯಕುಮಾರ ತಮ್ಮ ಸಿಬ್ಬಂದಿಯೊಂದಿಗೆ ಮಧುಕೇಶ್ವರ ದೇವಸ್ಥಾನ ಭೇಟಿ ನೀಡಿ ಸೋರಿಕೆಯನ್ನು ಖುದ್ದಾಗಿ ಪರಿಶೀಲನೆ ಮಾಡಿ, ಸೆಪ್ಟೆಂಬರ್ ಕೊನೆ ವಾರದಲ್ಲಿ ದುರಸ್ತಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

    ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಸೋರಿಕೆ ಎಲ್ಲೆಲ್ಲಿ ಇದೆ ಎಂದು ತೋರಿಸಿ ಮನವರಿಕೆ ಮಾಡಿದರು.

    ಸಮಿತಿ ಗೌರವಧ್ಯಕ್ಷ ಸಿ.ಎಫ್. ನಾಯ್ಕ ಮಾತನಾಡಿ, ಬನವಾಸಿ ದೇವಸ್ಥಾನ ಹೆಚ್ಚು ಅಭಿವೃದ್ಧಿ ಹಾಗೂ ಹೆಚ್ಚಿನ ಸಂರಕ್ಷಣೆಯೂ ಆಗಬೇಕು ಎಂದು ಆಗ್ರಹಿಸಿದರು.

    ಸಮಿತಿ ಕಾರ್ಯದರ್ಶಿ ವಿಶ್ವನಾಥ ವಡೆಯರ್, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರಾದ ಶಿವಯೋಗಿ ಉಳ್ಳಾಗಡ್ಡಿ, ಸೀಮಾ ಕೆರೂಡಿ, ದಯಾನಂದ ಮರಾಠೆ, ಜೈ ಶಂಕರ ಮೇಸ್ತ್ರಿ, ಸುಧೀರ ನಾಯರ, ಅರವಿಂದ ಬಳೆಗಾರ, ಪ್ರಮುಖರಾದ ಸಾಯಿರಾಮ ಕಾನಳ್ಳಿ, ನಾಗೇಶ ಪತ್ರೆ, ಶಂಕರ ಉಪ್ಪಾರ, ಅಭಿನಂದನ ಧಾರವಾಡ, ಇಲಾಖೆಯ ಅನಂತ ಖರೆ , ಬ್ರಹ್ಮಕುಮಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts