More

    ಬದುಕಿನಲ್ಲಿ ಶಿಸ್ತನ್ನು ಕಲಿಸುವ ಕ್ರೀಡೆ : ಶಾಸಕ ಎಂ.ಶ್ರೀನಿವಾಸ್ ಅಭಿಮತ 

    ಮಂಡ್ಯ : ಕ್ರೀಡಾಕೂಟಗಳು ಬದುಕಿನಲ್ಲಿ ಶಿಸ್ತನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
    ಮಂಡ್ನಯ ಗರದ ಅರ್ಕೇಶ್ವರನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 1ನೇ ವೃತ್ತದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳ ದೆಸೆಯಲ್ಲಿಯೇ ಅವರಿಗೆ ಕ್ರೀಡಾ ಮನೋಭಾವ ಬೆಳೆಸಬೇಕು. ಇದಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ ಹೆಚ್ಚು ಇರಬೇಕು. ಆ ಮೂಲಕ ಕ್ರೀಡಾ ಸ್ಪರ್ಧಿಗಳಿಗೆ ನೆರವಾಗಬೇಕು. ಕ್ರೀಡೆ ಎಂಬುದು ಒಂದು ಆಟವಷ್ಟೇ ಅಲ್ಲ. ಅದು ಶಿಸ್ತಿನಿಂದ ಕೂಡಿರಬೇಕು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಸಲಹೆ ನೀಡಿದರು.
    ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ವಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದಷ್ಟೇ ಮುಖ್ಯವಾಗಬೇಕು. ಗೆಲುವು, ಸೋಲುಗಳನ್ನು ಸವಾನವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ.ಚಂದ್ರಕಾಂತ ವಾತನಾಡಿದರು. ನಗರಸಭೆ ಸದಸ್ಯರಾದ ನಾಗೇಶ್, ವಿದ್ಯಾ, ಮೀನಾಕ್ಷಿ ಪುಟ್ಟಸ್ವಾಮಿ, ಪ್ರಾಂಶುಪಾಲ ಹನುಮಂತಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಂ.ಕುವಾರಸ್ವಾಮಿ, ಹಿರಿಯ ಮುಖ್ಯ ಶಿಕ್ಷಕಿ ಕೆ.ಪಾರ್ವತಮ್ಮ, ಉಪ ಪ್ರಾಂಶುಪಾಲ ಲೋಕೇಶ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಎಂ.ಆರ್.ಮಂಜು, ಬಿ.ಎಸ್.ಅನುಪವಾ ಇತರರಿದ್ದರು.

     

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts