More

    ಬಣಜಿಗರಿಗೂ ಮೀಸಲಾತಿ ನೀಡಿ

    ಗೋಕಾಕ: ಜೈನರಂತೆಯೇ ಬಣಜಿಗರಿಗೂ ಪ್ರತ್ಯೇಕ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಬಣಜಿಗ ಕ್ಷೇಮಾಭಿವದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಹೇಳಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ರಾಜ್ಯ ಬಣಜಿಗರ ಕ್ಷೇಮಾಭಿವದ್ಧಿ ಸಂಘದ ಗೋಕಾಕ ತಾಲೂಕು ಘಟಕದ 15ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ತಾಲೂಕಿಗೊಂದು ಬಣಜಿಗ ಭವನ ನಿರ್ಮಿಸುವ ಅವಶ್ಯಕತೆ ಇದೆ ಎಂದರು. ಸಾಹಿತಿ ಡಾ. ಸಂಗಮನಾಥ ಲೋಕಾಪುರ ಮಾತನಾಡಿ, ಬಣಜಿಗರು ಆಚಾರ-ವಿಚಾರಗಳ ಅನುಷ್ಠಾಣಕ್ಕೆ ಒತ್ತು ನೀಡಿ, ಮುಂದಿನ ಪೀಳಿಗೆಗೆ ನಮ್ಮತನ ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

    ವರ್ತಕ ಮಲ್ಲಿಕಾರ್ಜುನ ಚುನಮರಿ ಕಾರ್ಯಕ್ರಮ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಬಣಜಿಗ ಕ್ಷೇಮಾಭಿವದ್ಧಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕುರಬೇಟ, ಯುವ ಘಟಕದ ಅಧ್ಯಕ್ಷ ಸಂತೋಷ ಮಂತ್ರಣ್ಣವರ, ಗಿರೀಶ ಉದೋಶಿ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಗೋಕಾಕ ಅರ್ಬನ್ ಬ್ಯಾಂಕ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟಿ, ಚಂದ್ರಶೇಖರ ಕೊಣ್ಣೂರ, ಅಪ್ಪು ವಾಲಿ, ವೀರಣ್ಣ ಬಿದರಿ, ಕಾರ್ಯಕಾರಿಣಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಹಿತ್ತಲಮನಿ, ಡಾ. ವೀರಭದ್ರಪ್ಪ ಉಪ್ಪಿನ, ಅಶೋಕ ದಯಣ್ಣವರ, ವೀರೇಶ ಪರುಶೆಟ್ಟಿ, ಮಲ್ಲಿಕಾರ್ಜುನ ಯಕ್ಸಂಬಿ, ಬಸವರಾಜ ಉಣ್ಣಿ, ವಿವೇಕ ಜತ್ತಿ, ಆನಂದ ಗೋಟಡಕಿ ಇತರರಿದ್ದರು. ಸ್ವಾಮೀಜಿ, ಬಸನಗೌಡ ಪಾಟೀಲ, ಪ್ರೊ. ಸಂಗಮನಾಥ ಲೋಕಾಪುರ, ಮಲ್ಲಿಕಾರ್ಜುನ ಕನಶೆಟ್ಟಿ, ಶೋಭಾ ಕುರಬೇಟ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts