More

    ಎಲೆಕ್ಟ್ರಾನಿಕ್ಸ್ ತ್ಯಾಜ್ಯ ವಿಲೇವಾರಿಗೆ ಚಾಲನೆ

    ಕಳಸ: ರೋಟರಿ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು.
    ರೋಟರಿ ಅಧ್ಯಕ್ಷೆ ಸಾವಿತ್ರಿ ಬಿ.ಜೋಷಿ ಚಾಲನೆ ನೀಡಿ ಮಾತನಾಡಿ, ಕಳಸ ರೋಟರಿ ಕ್ಲಬ್‌ನಿಂದ ಎಲೆಕ್ಟ್ರಾನಿಕ್ಸ್ ತ್ಯಾಜ್ಯ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ಕಳಸದ ಜನರು ಸಹಕರಿಸಬೇಕು ಎಂದರು.
    ನಿಮ್ಮ ಮನೆಯಲ್ಲಿ ಇರುವಂಥ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ತಂದು ಕಳಸದ ಕೆ.ಎಂ.ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಫ್ಯೂಯಲ್ಸ್, ಶ್ರೀ ಅನ್ನಪೂರ್ಣೇಶ್ವರಿ ಮೋಟಾರ್ಸ್ ಹೊರನಾಡು ರಸ್ತೆ, ಶ್ರೀನಿವಾಸ ಎಲೆಕ್ಟ್ರಾನಿಕ್ಸ್ ಮಸೀದಿ ರಸ್ತೆಗಳಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅವುಗಳನ್ನು ಒಟ್ಟುಗೂಡಿಸಿ ತ್ಯಾಜ್ಯ ವಿಲೇವಾರಿಗೆ ನಾವು ವರ್ಗಾಯಿಸುತ್ತೇವೆ. ಇದರಿಂದ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
    ರೋಟರಿ ಸದಸ್ಯರಾದ ರಾಜಲಕ್ಷ್ಮೀ ಬಿ.ಜೋಷಿ, ಗಿರಿಜಾ ಶಂಕರ್ ಜೋಷಿ, ಕೆ.ಕೆ.ಬಾಲಕೃಷ್ಣ ಭಟ್, ಣೀಶ್, ಪ್ರಸನ್ನಕುಮಾರ್, ಸತ್ಯೇಂದ್ರ, ಮಹೇಂದ್ರ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts