More

    ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

    ಮುಂಡರಗಿ: ತಾಲೂಕಿನ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರು ಶಿಂಗಟಾಲೂರ, ಶೀರನಹಳ್ಳಿ, ಗಂಗಾಪೂರ, ಹಮ್ಮಿಗಿ, ನಾಗರಹಳ್ಳಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ ಗ್ರಾಮಗಳಲ್ಲಿ ಭಾನುವಾರ 12ಲಕ್ಷ ರೂ. ವೆಚ್ಚದಲ್ಲಿ 3 ಸಾವಿರ ಬಡ ಕುಟುಂಬಳಿಗೆ ಆಹಾರ ಧಾನ್ಯ ಮತ್ತು ದಿನ ಬಳಕೆ ವಸ್ತುಗಳನ್ನು ವಿತರಿಸಿದರು.

    ಪ್ರತಿ ಕುಟುಂಬಕ್ಕೆ 1ಕೆಜಿ ಬೇಳೆ, 1ಕೆಜಿ ಸಕ್ಕರೆ, 1ಕೆಜಿ ಎಣ್ಣೆ, 1ಕೆಜಿ ಚಪಾತಿ ಹಿಟ್ಟು, 1ಕೆಜಿ ರವೆ, 100ಗ್ರಾಂ ಚಹಾಪುಡಿ, ಬಟ್ಟೆ ಹಾಗೂ ಸೋಪುಗಳು, ಬಿಸ್ಕೆಟ್ ಸೇರಿ ಒಟ್ಟು 12ಲಕ್ಷ ರೂ.ವೆಚ್ಚದಲ್ಲಿ 3 ಸಾವಿರ ಬಡ ಕುಟುಂಬಗಳಿಗೆ ವಿತರಿಸಿದರು.

    ಆಹಾರ ಧಾನ್ಯ ಮತ್ತು ದಿನ ಬಳಕೆ ವಸ್ತುಗಳನ್ನು ವಿತರಣೆಗೆ ಸಚಿವ ಸಿ.ಸಿ. ಪಾಟೀಲ ಚಾಲನೆ ನೀಡಿ, ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕರಬಸಪ್ಪ ಹಂಚಿನಾಳ ಅವರು ಸರ್ಕಾರಕ್ಕೆ ಈಗಾಗಲೇ 1ಲಕ್ಷ ರೂ. ದೇಣಿಗೆ ನೀಡಿದ್ದು, ಈಗ ಬಡ ಕುಟುಂಬಕ್ಕೆ ಸಹಾಯಾರ್ಥವಾಗಿ 12 ಲಕ್ಷ ರೂ.ವೆಚ್ಚದಲ್ಲಿ ಅಗತ್ಯ ದಿನಸಿ ಸಾಮಗ್ರಿ ಪೂರೈಸುತ್ತಿರುವುದು ಅಭಿನಂದನಾರ್ಹ. ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ಬಡವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅಗತ್ಯ ದಿನಸಿ ಸಾಮಗ್ರಿ ಪೂರೈಸಿದ್ದೇವೆ. ಸರ್ಕಾರ ಕೈಗೊಳ್ಳುವಂತ ನಿರ್ಣಯಕ್ಕೆ ಬದ್ಧವಾಗಿ ಎಲ್ಲರೂ ಅಂತರ ಕಾಯ್ದುಕೊಂಡು ಕರೊನಾ ವೈರಸ್ ಹೊಡೆದೋಡಿಸಲು ಮುಂದಾಗಬೇಕು ಎಂದರು. ಶಾಸಕ ರಾಮಣ್ಣ ಲಮಾಣಿ, ತಹಸೀಲ್ದಾರ್ ಡಾ.ವೆಂಕಟೇಶ ನಾಯಕ, ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಎಪಿಎಂಸಿ ಸದಸ್ಯರಾದ ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಬಳ್ಳೊಳ್ಳಿ, ಮುಖಂಡರಾದ ಎಸ್.ವಿ. ಪಾಟೀಲ, ರಜನಿಕಾಂತ ದೇಸಾಯಿ, ಡಾ.ಕುಮಾರಸ್ವಾಮಿ ಹಿರೇಮಠ, ಸೀತಾರಾಮರಾಜು, ನಾಗೇಶ ಹುಬ್ಬಳ್ಳಿ, ಮೈಲಾರಪ್ಪ ಉದಂಡಿ, ಕೊಪ್ಪಣ್ಣ ಕೊಪ್ಪಣ್ಣವರ, ಅಂದಪ್ಪ ಉಳ್ಳಾಗಡ್ಡಿ, ಆರ್.ಎಂ.ತಪ್ಪಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts