More

    ಬಡ ಕಲಾವಿದರ ನೆರವಿಗೆ ಸರ್ಕಾರಮುಂದಾಗಲಿ

    ಯಾದಗಿರಿ: ಅಂತರಾಷ್ಟ್ರೀಯ ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಂಗಳವಾರ `ವಿಜಯವಾಣಿ’ ಕಚೇರಿಗೆ ಭೇಟಿ ನೀಡಿದರು.
    ಪತ್ರಿಕೆ ಸಾಗಿ ಬಂದ ಹಾದಿ, ಅತ್ಯಲ್ಪ ಅವಧಿಯಲ್ಲೇ ಓದುಗರ ಮನ ತಲುಪುವ ಮೂಲಕ ನಾಡಿನ ನಂ.1 ಕನ್ನಡ ದಿನಪತ್ರಿಕೆಯಾಗಿ ಬೆಳೆದ ಪರಿಯನ್ನು ಶ್ಲಾಘಿಸಿದ ಅವರು, ಸಿಎಂಡಿ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಆನಂದ ಸಂಕೇಶ್ವರ ಕಾಯಕಯೋಗಿಗಳಾಗಿದ್ದಾರೆ. ಪತ್ರಿಕೋದ್ಯಮ ಮತ್ತು ಸಾರಿಗೆ ಕ್ಷೇತ್ರದಲ್ಲಿ ಅವರು ಸಾಧಿಸಿದ ಜಯ ಅನನ್ಯ. ತಮ್ಮ ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗಿಗಳಿಗೆ ಕೆಲಸ ನೀಡುವ ಮೂಲಕ ಆಶಾಕಿರಣವಾಗಿದ್ದಾರೆ ಎಂದು ಬಣ್ಣಿಸಿದರು.

    ಕರೊನಾ ಲಾಕಡೌನ್ ಹೊಡೆತಕ್ಕೆ ನಾಡಿನ ಬಡ ಮತ್ತು ಮದ್ಯಮ ವರ್ಗದ ಜತೆಯಲ್ಲಿ ಬಡ ಕಲಾವಿದರೂ ಸಿಲುಕಿದ್ದಾರೆ. ಕೆಲ ಕಲಾವಿದರಂತೂ ತಮಗೆ ಒಪ್ಪತ್ತಿನ ಊಟ ನೀಡಲು ನೆರವಾಗಿ ಎಂದು ಸಾಮಾಜಿಕ ಜಾಲತಣಾಗಳ ಮೂಲಕ ಮೊರೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಶೇ.99 ರಷ್ಟು ಬಡ ಕಲಾವಿದರು ಕರೊನಾದಿಂದ ಸಮಸ್ಯೆಗೆ ಸಿಲುಕಿದ್ದಾರೆ. ಅವರ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಸರ್ಕಾರ ಈಗಾಗಲೇ ಸಮಾಜದ ಅನೇಕ ಸ್ತರಗಳಲ್ಲಿ ದುಡಿಯುವ ವರ್ಗಕ್ಕೆ ಆರ್ಥಿಕವಾಗಿ ಸಹಾಯಹಸ್ತ ಚಾಚಿದ್ದು ಸ್ವಾಗತಾರ್ಹ. ಅದರಂತೆ ಬಡ ಕಲಾವಿದರಿಗೂ ಸಹಾಯ ಮಾಡಲು ಮುಂದೆ ಬರಬೇಕಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕನರ್ಾಟಕ ಭಾಗದಲ್ಲಿನ ಕಲಾವಿದರಿಗೆ ಈ ಸಂದರ್ಭದಲ್ಲಿ ನೆರವಿಗೆ ಬರಬೇಕಿದೆ ಎಂದು ಪ್ರತಿಪಾದಿಸಿದರು.

    ಯಾದಗಿರಿ ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರು, ವೃತ್ತಿ ನಿರತ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ವಿಶೇಷವಾಗಿ ಜಿಲ್ಲೆಯಲ್ಲಿ ರಂಗಮಂದಿರ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ರಂಗಮಂದಿರ ನಿರ್ಮಾಣವಾದರೆ ಅನೇಕ ಕಾರ್ಯಕ್ರಮಗಳನ್ನು ನೀಡಲು ಕಲಾವಿದರಿಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಜರ್ ಹಾಕುವ ಅವಶ್ಯಕತೆ ಇದೆ ಎಂದರು.

    ನಗರದ ಸಹರಾ ಗಾರ್ಡನ್ನಲ್ಲಿ ಹಿರಿಯ ಸಾಹಿತಿ ಬೀಚಿ ಅವರ ಹೆಸರಲ್ಲಿ ಬಯಲು ರಂಗಮಂದಿರ ನಿಮರ್ಾಣಕ್ಕಾಗಿ ಈಗಾಗಲೇ ನಗರಸಭೆಗೆ ಮನವಿ ಮಾಡಲಾಗಿದ್ದು, ಬೀಚಿ ಸವಿನೆನಪಲ್ಲಿ ಬಯಲು ರಂಗಮಂದಿರ ನಿಮರ್ಾಣವಾಗಿದ್ದಲ್ಲಿ ಸಾಕಷ್ಟು ಕಲಾವಿದರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts