More

    ನೆರೆ ಸಂತ್ರಸ್ತರ ನೆರವಿಗೆ ಅಗತ್ಯ ಕ್ರಮ – ಶ್ರೀಶೈಲ ಹಿರೇಮಠ

    ಹುಕ್ಕೇರಿ: ಅಕ್ಷರ ದಾಸೋಹ ಇಲಾಖೆ ಪ್ರಭಾರಿ ತಾಲೂಕು ಸಹಾಯಕ ನಿರ್ದೇಶಕರಾಗಿದ್ದ ಶ್ರೀಶೈಲ ಹಿರೇಮಠ ಅವರನ್ನು ರಾಜ್ಯ ಸರ್ಕಾರ ಅದೇ ಹುದ್ದೆಗೆ ಕಾಯಂ ಆಗಿ ನಿಯುಕ್ತಿಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರಿ ನೌಕರರ ಸಂಘ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಸಂಘಟನೆ ವತಿಯಿಂದ ಸತ್ಕರಿಸಲಾಯಿತು.

    ಸತ್ಕಾರ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಹಿರೇಮಠ, ಸಚಿವ ಉಮೇಶ ಕತ್ತಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ನಿರ್ದೇಶನದಂತೆ ಕೋವಿಡ್-19 ಸಂಕಷ್ಟ ಸಮಯದಲ್ಲಿ ತಾಲೂಕಾಧಿಕಾರಿಗಳ ಸಹಕಾರದಿಂದ ಶ್ರಮಿಸಿದ್ದರಿಂದ ಈ ಹುದ್ದೆ ದೊರಕಿದೆ ಎಂದರು.

    ಒಂದು ವಾರದಿಂದ ಸತತ ಸುರಿಯುತ್ತಿರುವ ಮಹಾ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡು ಜನ ಸಂಕಷ್ಟದಲ್ಲಿದ್ದಾರೆ. ಜಲಾವೃತ ಪ್ರದೇಶದ ನೆರೆ ಸಂತ್ರಸ್ತರಿಗೆ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ, ರಾತ್ರಿ ಊಟೋಪಚಾರ ವ್ಯವಸ್ಥೆ ಕಲ್ಪಿಸಲು ಸಚಿವ ಉಮೇಶ ಕತ್ತಿ ಆದೇಶಿಸಿದ್ದಾರೆ.

    ಅವರ ನಿರ್ದೇಶನದಂತೆ ತಾಲೂಕಿನ 27 ಕಡೆ ಶಾಲೆ ಮತ್ತು ಗುಡಿ-ಗುಂಡಾರ, ಸಮುದಾಯ ಭವನಗಳಲ್ಲಿ ಆಶ್ರಯ ಕಲ್ಪಿಸಿದ ಕಾಳಜಿ ಕೇಂದ್ರಗಳಲ್ಲಿ ಇರುವ ಬಡಕುಂದ್ರಿ, ಯರಗಟ್ಟಿ, ಬಸ್ತವಾಡ, ಗೌಡವಾಡ, ಮದಮಕ್ಕನಾಳ, ಬೆಣಿವಾಡ, ನೊಗನಿಹಾಳ, ಕೊಟಬಾಗಿ, ಗುಡಸ, ಘೋಡಗೇರಿ, ಹೊಸೂರ, ಸಂಕೇಶ್ವರ, ಹೆಬ್ಬಾಳ, ಚಿಕಾಲಗುಡ್ಡ, ಕುರಣಿ, ಅರ್ಜುನವಾಡ, ಕೋಚರಿ, ಪಾಶ್ಚಾಪುರ ಗ್ರಾಮಗಳ 3,500 ಜನರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಂಘಟನೆಯ ತಾಲೂಕಾಧ್ಯಕ್ಷ ಮಹಾಂತೇಶ ನಾಯಿಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಸವಪ್ರಭು ಬಿ.ಅಂಗಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿನಾಯಕ ನಾಯಿಕ, ಸತೀಶ ಗಂಗಪ್ಪನವರ, ಶ್ರೀನಾಥ ಘಸ್ತಿ, ನೇಮಿನಾಥ ಅಸ್ಕಿ, ತಮ್ಮಣ್ಣ ಹಡಪದ ಮತ್ತಿತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts