More

    ಬಡಾವಣೆ ನಿರ್ವತೃಗಳ ವಿರುದ್ಧ ಕ್ರಮ ಕೈಗೊಳ್ಳಿ

    ಮುಂಡರಗಿ: ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸದಿರುವ ಬಡಾವಣೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಕಿಸಾನ್ ಜಾಗೃತಿ ವಿಕಾಸ ಸಂಘದ ಕಾರ್ಯಕರ್ತರು ಪುರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಂಘದ ಉಪಾಧ್ಯಕ್ಷ ವಿಶ್ವನಾಥ ತಾಂಬ್ರಗುಂಡಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ, ನಿವೇಶನ ಖರೀದಿಸಿದವರಿಗೆ ತೀವ್ರ ತೊಂದರೆ ಉಂಟಾಗಿದೆ. ಸರ್ಕಾರಕ್ಕೆ ಮತ್ತು ಜನತೆಗೆ ಮೋಸ ಮಾಡಿ ಬಡಾವಣೆಗಳಲ್ಲಿನ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ತಪ್ಪಿತಸ್ಥರ ವಿರá-ದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ಮಾತನಾಡಿ, ಪಟ್ಟಣದಲ್ಲಿ 127ಕ್ಕೂ ಹೆಚ್ಚು ಬಡಾವಣೆಗಳಿದ್ದು, ಅವುಗಳಲ್ಲಿ ಬಹುತೇಕ ಬಡಾವಣೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು, ಆಟದ ಮೈದಾನ ಮತ್ತಿತರ ಅಗತ್ಯ ಸೌಲಭ್ಯಗಳು ಇಲ್ಲದಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಇಂತಹ ಬಡವಾಣೆಯಲ್ಲಿ ಜಾಗ ಖರೀದಿಸಿದವರು ತೊಂದರೆ ಅನá-ಭವಿಸá-ತ್ತಿದ್ದಾರೆ ಎಂದರು.

    ಪ್ರತಿಭಟನಾಕಾರರೊಂದಿಗೆ ರ್ಚಚಿಸಿದ ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ‘ಸೌಲಭ್ಯ ಕಲ್ಪಿಸದ ಕೆಲವು ಖಾಸಗಿ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಪುರಸಭೆ ಕಾನೂನು ಸಲಹೆಗಾರರನ್ನು ಸಂರ್ಪಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

    ಕಿಸಾನ್ ಜಾಗೃತಿ ವಿಕಾಸ ಸಂಘದ ಜಿಲ್ಲಾಧ್ಯಕ್ಷ ದ್ರುವಕುಮಾರ ಹೂಗಾರ, ತಾಲೂಕಾಧ್ಯಕ್ಷ ಗಣೇಶ ಭರಮಕ್ಕನವರ, ಚಂದ್ರಹಾಸ ಕಮ್ಮಾರ, ಸಂತೋಷ ಹಿರೇಮನಿ, ಜಗದೀಶಗೌಡ ಪಾಟೀಲ, ಚಂದ್ರಶೇಖರ ಇಟಗಿಮಠ, ಮಂಜುನಾಥ ವಿರುಪಾಪುರ, ಮೃತ್ಯುಂಜಯ ಹಿರೇಮಠ, ರಾಜು ಅಸುಂಡಿ, ದಾದಾಪೀರ ಮಲಕಬಾಯಿ, ವಿಜಯಕುಮಾರ ಡಂಬಳ, ಶಿವಕುಮಾರ ಪಾಟೀಲ, ಗಣೇಶ ಇದ್ಲಿ, ರಾಮಣ್ಣ ಈರಗಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts