More

    ಬಡವರ ನೆರವಿಗೆ ಧಾವಿಸಿದ ವೈದ್ಯ


    ಭಟ್ಕಳ: ಸುಮಾರು 4000 ಸಾವಿರ ಬಡ ಜನರಿಗೆ ಅವಶ್ಯ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕಷ್ಟ ಕಾಲದಲ್ಲಿ ಹೊನ್ನಾವರ- ಭಟ್ಕಳದ ತಾಲೂಕಿನ ಜನರ ನೆರವಿಗೆ ದಾವಿಸಿದ್ದಾರೆ.

    ಭಟ್ಕಳ ತಾಲೂಕಿನ 1500 ಆಟೋ ಚಾಲಕರು, ಗೂಡ್ಸ್ ರಿಕ್ಷಾ ಚಾಲಕರು, ಟೆಂಪೋ ಚಾಲಕರು, ಅವರ ಸಹಾಯಕರು, ಕಾರ್ ಚಾಲಕರು ಸೇರಿ 14 ಲಕ್ಷ ರೂ. ವೆಚ್ಚದಲ್ಲಿ 2000 ಜನರಿಗೆ ಬೇಕಾಗಿದ್ದ ಸಲಕರಣೆಗಳನ್ನು ನೀಡಿದ್ದಾರೆ. ಅಲ್ಲದೆ, ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳನ್ನು ವಿತರಿಸಿದ್ದಾರೆ. ಹಾಗೆಯೆ ಹೊನ್ನಾವರ ತಾಲೂಕಿನಲ್ಲೂ ಬಡವರಿಗೆ ಆಹಾರದ ಕಿಟ್​ಗಳನ್ನು ವಿತರಿಸಿದ್ದಾರೆ. ಸೋಮವಾರ ಮತ್ತೆ ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ 4000ಕ್ಕೂ ಅಧಿಕ ಕಿಟ್​ಗಳನ್ನು ವಿತರಿಸಿದ್ದಾರೆ.

    ಸಹಾಯವಾಣಿ ಕೇಂದ್ರ: ಮಾಜಿ ಶಾಸಕ ಮಂಕಾಳ ವೈದ್ಯ ಈ ಲಾಕ್​ಡೌನ್ ಸಂದರ್ಭದಲ್ಲಿ ತಮ್ಮದೆ ಸಹಾಯವಾಣಿ ಕೇಂದ್ರ ತೆರೆದಿದ್ದಾರೆ. ಇದರೊಂದಿಗೆ ಯುವ ತಂಡವನ್ನು ರಚಿಸಿಕೊಂಡಿದ್ದಾರೆ. ಭಟ್ಕಳ ಕ್ಷೇತ್ರದ ಆಹಾರ ಇಲ್ಲದೆ ಪರದಾಡುವ ವ್ಯಕ್ತಿ ಮಾಜಿ ಶಾಸಕರಿಗೆ ಕರೆ ಮಾಡಿದರೆ ಇವರ ತಂಡದ ಸದಸ್ಯರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಅವರಿಗೆ ಸಕಲ ಸಹಾಯವನ್ನು ಮಾಡುತ್ತಿದ್ದಾರೆ.

    ನನ್ನ ಕ್ಷೇತ್ರದ ಜನತೆ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶ ನನ್ನದು. ಎಲ್ಲೆ ರೀತಿಯ ಸಹಕಾರಕ್ಕೂ ನಿಮ್ಮೊಂದಿಗೆ ನಾನು ನಿಲ್ಲಲು ಸದಾ ಸಿದ್ಧನಿದ್ದೇನೆ.
    ಮಂಕಾಳ ಎಸ್. ವೈದ್ಯ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts