More

    ಬಡವರಿಗಾಗಿ ಉಚಿತ ಡಯಾಲಿಸಿಸ್

    ಕಲಬುರಗಿ: ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗಾಗಿ ನಗರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ರೂವಾರಿ, ಸಾಮಾಜಿಕ ಕಾರ್ಯಕರ್ತ ಶರಣು ಪಪ್ಪಾ ತಿಳಿಸಿದರು.
    ಡಯಾಲಿಸಿಸ್ ಕೇಂದ್ರವನ್ನು ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಟ್ರಸ್ಟ್ ಅಡಿ ನೋಂದಣಿ ಮಾಡಿಸಿದ್ದು, ಪೂರ್ಣಿಮಾ ಪಿ.ಎಂ.ಬಿರಾದಾರ ಹೆಸರಿನಲ್ಲಿ ಏಷಿಯನ್ ಮಾಲ್ಗೆ ಹೊಂದಿಕೊಂಡಿರುವ ಏಷಿಯನ್ ಬಿಜಿನೆಸ್ ಸೆಂಟರ್ನಲ್ಲಿ ಜನವರಿ ಅಂತ್ಯದೊಳಗೆ ಕೇಂದ್ರ ಕಾಯರ್ಾರಂಭ ಮಾಡಲಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    2000 ಚದರಡಿ ಬಾಡಿಗೆ ಜಾಗದಲ್ಲಿ ಮಾದರಿ ಮತ್ತು ಹೈಟೆಕ್ ಡಯಾಲಿಸಿಸ್ ಘಟಕ ಇದಾಗಲಿದ್ದು, ಜರ್ಮನಿಯಿಂದ ಯಂತ್ರೋಪಕರಣಗಳನ್ನು ಬುಕಿಂಗ್ ಮಾಡಲಾಗಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬಿಪಿಎಲ್ ಕಾಡರ್್ ಹೊಂದಿದವರಿಗೆ ಉಚಿತ ಡಯಾಲಿಸಿಸ್, ಎಪಿಎಲ್ ಕಾಡರ್್ ಹೊಂದಿದವರಿಗೆ 500 ರೂ. ಶುಲ್ಕ ಇರಲಿದೆ. ಕೆಲ ಔಷಧಗಳನ್ನು ಸಹ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಮಂತರು ಹೇಗೋ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರು ಇಂತಹ ದುಬಾರಿ ಚಿಕಿತ್ಸೆಗಾಗಿ ಇನ್ನಿಲ್ಲದ ಪರದಾಟ ನಡೆಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕೇಂದ್ರ ಆರಂಭಿಸಲು ಯೋಚಿಸಿದಾಗ ಕಲವರು ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಉದ್ಯಮಿ ಶಿವರಾಜ ಖೂಬಾ ತಮ್ಮ ತಾಯಿ ಹೆಸರಿನಲ್ಲಿ ಒಂದು ಡಯಾಲಿಸಿಸ್ ಯಂತ್ರ ದೇಣಿಗೆಯಾಗಿ ನೀಡಿದ್ದಾರೆ ಎಂದು ವಿವರಿಸಿದರು.
    ಡಾ.ಪಿ.ಎಂ. ಬಿರಾದಾರ, ಹಾಸ್ಪಿಟಲ್ ಮ್ಯಾನೇಜ್ಮೆಂಟ್ ತಜ್ಞ ಶರಣ ಮಳಖೇಡಕರ್, ಪ್ರಶಾಂತ ಗುಡ್ಡಾ, ಟ್ರಸ್ಟ್ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts