More

    ಬಜೆಟ್ನಲ್ಲಿ 2 ಸಾವಿರ ಕೊಟಿ ನೀಡಿ

    ಯಾದಗಿರಿ: ರಾಜ್ಯದ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಎರಡು ಸಾವಿರ ಕೋಟಿ ರೂ.ಅನುದಾನ ಮೀಸಲಿರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಲಂ ಜನಾಂದೋಲನಾ ಸಂಘಟನೆಯಿಂದ ಮಂಗಳವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಸಂಘಟನೆ ಅಧ್ಯಕ್ಷ ನರಸಿಂಹ ಮೂತರ್ಿ ಮಾತನಾಡಿ, ಸ್ಲಂ ನಿವಾಸಿಗಳ ಸಂವಿಧಾನ ಬದ್ಧ ಬದುಕುವ ಹಕ್ಕು ಹಾಗೂ ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯದ ಸಮಪಾಲು ಸಮಬಾಳು ಆಶಯದಲ್ಲಿ 18 ಜಿಲ್ಲಾ ಕೇಂದ್ರಗಳಲ್ಲಿ ಸುಮಾರು 810ಕ್ಕೂ ಹೆಚ್ಚು ಸ್ಲಂಗಳಲ್ಲಿ 40 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಹೊಂದಿರುವ ಸ್ಲಂ ಜನರೇ ನಡೆಸುತ್ತಿರುವ ಸಂಘಟನೆಯಾಗಿದ್ದು, ನಮ್ಮ ನಿರಂತರ ಒತ್ತಾಯಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಇತ್ತೀಚೆಗೆ ಸಂಪುಟ ಸಭೆಯಲ್ಲಿ ಹಕ್ಕುಪತ್ರ ನೀಡುವ ಐತಿಹಾಸಿಕ ತೀಮರ್ಾನ ಮಾಡಿರುವುದು ಸರಿಯಷ್ಟೇ. ಹಾಗೂ ರಾಜ್ಯ ಸಕರ್ಾರದಿಂದ ಬ್ಯಾಂಕ್ಗಳಿಗೆ 100 ಕೋಟಿ ಬಾಂಡ್ ನೀಡಿ ಸಾಲ ಪಡೆಯಲು ಮುಂದಾಗಿರುವುದು ಸ್ವಾಗತರ್ಹ ಎಂದರು.

    ರಾಜ್ಯದಲ್ಲಿ ನಗರ ಜನಸಂಖ್ಯೆಯ ಶೇ.40ರಷ್ಟು ಜನ 3699 ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರಲ್ಲಿ 2780 ಕೊಳಚೆ ಪ್ರದೇಶಗಳು ಕಾನೂನು ವ್ಯಾಪ್ತಿಗೆ ಒಳಪಟ್ಟಿದ್ದು 1973ರಲ್ಲಿ ಜಾರಿಯಾದ ರಾಜ್ಯ ಕೊಳಗೇರಿ ಅಭಿವೃದ್ಧಿ ಕಾಯ್ದೆ ಮತ್ತು 2016ರ ಕನರ್ಾಟಕ ಕೊಳಗೇರಿಗಳ ಸಮಗ್ರ ಅಭಿವೃದ್ಧಿ ನೀತಿ ಅನ್ವಯ ಜನಸಂಖ್ಯೆವಾರು ಪಾಲು ನೀಡಿ ಈ ಬಾರಿಯ ಬಜೆಟ್ನಲ್ಲಿ ಕೊಳಗೇರಿಗಳ ಸಮಗ್ರಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

    ಸಂಘಟನೆ ಜಿಲ್ಲಾಧ್ಯಕ್ಷೆ ರೇಣುಕಾ ಸರಡಗಿ, ಹಣಮಂತ ಶಹಾಪುರಕರ್, ಸಂಗೀತಾ ಅರಿಕೇರಾ, ನಿರ್ಮಲಾ ಸುಂಗಲಕರ್, ಈರಮ್ಮ ಕೋಳೂರ, ಬಾಬು ಮಿಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts