More

    ಬಂಡೆ ಕಾರ್ಮಿಕರಿಗೆ ಕೆಲಸ ಮಾಡಲು ಬಿಡಿ; ಇಲ್ಲವಾದರೆ ನ.3ರಿಂದ ಅನಿರ್ದಿಷ್ಟ ಕಾಲ ಉಪವಾಸ: ಡಿಸಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರ

    ತೀರ್ಥಹಳ್ಳಿ: ಮೇಲಿನ ಕುರುವಳ್ಳಿಯಲ್ಲಿರುವ ಬಂಡೆಗೆ ಕರೆದಿರುವ ಟೆಂಡರ್ ಅಂತಿಮಗೊಳಿಸಿ ಕಾರ್ಮಿಕರಿಗೆ ಕೆಲಸ ಆರಂಭ ಮಾಡಲು ಅವಕಾಶ ಕೊಡಬೇಕು ಅಥವಾ ಕಲ್ಲುಕುಟಿಕರ ಸಂಘಕ್ಕೆ ಮರು ನವೀಕರಣ ಮಾಡಿ ರಿಯಾಯತಿ ದರದಲ್ಲಿ ಶುಲ್ಕ ಪಡೆದು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು. ಇಲ್ಲವಾದಲ್ಲಿ ನವೆಂಬರ್ ಮೂರನೇ ತಾರೀಕಿನಿಂದ ಬಂಡೆ ಕಾರ್ಮಿಕರ ಪರವಾಗಿ ಅನಿರ್ದಿಷ್ಟ ಕಾಲದ ಉಪವಾಸ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಶನಿವಾರ ಪತ್ರ ಬರೆದಿದ್ದಾರೆ.
    ಕಲ್ಲು ಬಂಡೆ ಕಾರ್ಮಿಕರಿಗೆ ಕಲ್ಲು ಕೆಲಸ ಬಿಟ್ಟು ಬೇರೆ ಕೆಲಸ ಮಾಡುವ ಅನುಭವ ಇಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಹಸಿವಿನಿಂದ ಬಳಲುತ್ತಿರುವ ಈ ಕಾರ್ಮಿಕರ ಪರವಾಗಿ ನಾನು ಅ. 14 ರಂದು ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂತಿದ್ದೆ. ಆ ದಿನ ಸಂಜೆ ತಾವು ಈ ಸಮಸ್ಯೆಯನ್ನು ಐದು ದಿನಗಳ ಒಳಗೆ ಬಗೆಹರಿಸುವ ನೀಡಿದ ಭರವಸೆ ಅನ್ವಯ ನಿಮ್ಮ ಮಾತಿನ ಮೇಲೆ ನಂಬಿಕೆ ಇಟ್ಟು ಉಪವಾಸವನ್ನು ನಿಲ್ಲಿಸಿದ್ದೆ. ಆದರೆ ಕಳೆದ 10 ದಿನಗಳಿಂದ ಪೊಲೀಸ್ ಅಧಿಕಾರಿಗಳು ಈ ಕಾರ್ಮಿಕರಿಗೆ ಪೂರ್ಣ ಕೆಲಸ ಮಾಡಲು ಬಿಡುತ್ತಿಲ್ಲ. ದುಡಿಮೆ ಇಲ್ಲದ ಕಾರಣ ಈ ಕುಟುಂಬಗಳು ಸಾಲಸೂಲ ಮಾಡಿ ಬದುಕುವ ಅನಿವಾರ್ಯತೆ ಎದುರಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಆಯ್ಕೆಯಾದ ನಂತರ ಕಳೆದ ನಾಲ್ಕೂವರೆ ವರ್ಷದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿ ಕಿರುಕುಳದಿಂದ ಸುಮಾರು 2,500 ಕಾರ್ಮಿಕರು ಇಲ್ಲಿಂದ ವಲಸೆ ಹೋಗಿದ್ದಾರೆ. ಕಾರ್ಮಿಕರ ಮೇಲೆ ನೂರಾರು ಕ್ರಿಮಿನಲ್ ಮೊಕದ್ದಮೆಗಳು ಕೂಡ ದಾಖಲಾಗಿವೆ. ಬಂಡೆ ಕಾರ್ಮಿಕರ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು ಈ ಕೆಲಸವನ್ನೇ ನಂಬಿಕೊಂಡಿರುವ 300 ಕುಟುಂಬಗಳು ಉಪವಾಸ ಬೀಳುವಂತಾಗಿದೆ. ಆದ್ದರಿಂದ ಸದರಿ ಬಂಡೆಯಲ್ಲಿ ಇವರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸದ ಪಕ್ಷದಲ್ಲಿ ನ.3ರಿಂದ ಸಮಸ್ಯೆ ಬಗೆಹರಿಯುವವರೆಗೆ ಅನಿರ್ದಿಷ್ಟ ಕಾಲದ ಉಪವಾಸ ಮಾಡಲು ನಿರ್ಧರಿಸಿದ್ದೇನೆ. ಹಸಿವು ನಿವಾರಣೆ ಮಾಡುವ ಕೆಲಸ ಸರ್ಕಾರ ಮಾಡುತ್ತೆ ಎಂಬ ನಂಬಿಕೆಯೂ ನನಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts