More

    ಬಂಡವಾಳಶಾಹಿ ವ್ಯವಸ್ಥೆ ಬೇರು ಕಿತ್ತೆಸೆಯಿರಿ –  ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ

    ದಾವಣಗೆರೆ: ದೇಶದಲ್ಲಿ ಕಾರ್ಮಿಕರ ಶೋಷಣೆ ನಿರಂತರ ಮುಂದುವರಿದಿದ್ದು, ದುಡಿಯುವ ವರ್ಗದ ಜನರು ಒಗ್ಗಟ್ಟಿನಿಂದ ಬಂಡವಾಳಶಾಹಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯಬೇಕು ಎಐಯುಟಿಯುಸಿ ಅಧ್ಯಕ್ಷ ಸೋಮಶೇಖರ್ ಕರೆ ನೀಡಿದರು.
    ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಮಾರ್ಕ್ಸ್‌ವಾದಿ ಚಿಂತಕ ಹಾಗೂ ಕಾರ್ಮಿಕ ವರ್ಗದ ನಾಯಕ ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭಾರತ ಬ್ರಿಟಿಷರಿಂದ ಮುಕ್ತವಾದಾಗ ಶಿವದಾಸ್ ಘೋಷ್ ಅವರು ಇನ್ನು ಮುಂದೆ ಬಂಡವಾಳಶಾಹಿಗಳು ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಶೋಷಣೆಗೊಳಿಸಲಿದ್ದಾರೆ ಎಂಬ ಆತಂಕದಲ್ಲಿದ್ದರು. ಹೀಗಾಗಿ ದೇಶದ ಸ್ವಾತಂತ್ರ್ಯವನ್ನು ಅವರು ಸಂಭ್ರಮಿಸಲಿಲ್ಲ. ಅವರು ಗ್ರಹಿಸಿದಂತೆ ಕಾರ್ಮಿಕರ ಶೋಷಣೆ ನಡೆಯುತ್ತಲೇ ಇದೆ ಎಂದು ಹೇಳಿದರು.
    ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದೆ. ಬಂಡವಾಳಶಾಯಿ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ಸ್ವಾಮ್ಯದ ಹಲವಾರು ಸಂಸ್ಥೆಗಳನ್ನು ಖಾಸಗೀಕರಣಕ್ಕೆ ಒಳಪಡಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕಾಯಂ ಸ್ವರೂಪದ ಹುದ್ದೆಗಳೇ ಇರುವುದಿಲ್ಲ. ಎಲ್ಲವೂ ಗುತ್ತಿಗೆ ಆಧಾರದಲ್ಲಿ ನಡೆಯಲಿದ್ದು, ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದೆ ಇರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಲ್ಲ ಶೋಷಣೆಗಳ ಮುಕ್ತಿಗೆ ಶಿವದಾಸ್ ಘೋಷ್ ಅವರ ವಿಚಾರಗಳೊಂದೇ ಪರಿಹಾರ ಮಾರ್ಗವಾಗಿದ್ದು, ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ತಿಳಿಸಿದರು.
    ಮಣಿಪುರದಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ನಡೆದಿದ್ದು ದೇಶದ ನಾಗರೀಕ ಸಂಸ್ಕೃತಿ ಯಾವ ಕಡೆಗೆ ಸಾಗುತ್ತಿದೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
    ಎಐಯುಟಿಯುಸಿ ಜಿಲ್ಲಾಧ್ಯಕ್ಷ ಕೈದಾಳೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ, ಜಿಲ್ಲಾ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ಪ್ರಕಾಶ್, ಸಂತೋಷ್, ರೇವಣಸಿದ್ದೇಶ್, ನಿಂಗರಾಜು, ಪರಮೇಶ್ವರಪ್ಪ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts