More

    ಬಂಗಾರಪೇಟೆ ತಹಸೀಲ್ದಾರ್ ಹತ್ಯೆಗೆ ವ್ಯಾಪಕ ಖಂಡನೆ

    ಕಾರವಾರ: ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ, ಸರ್ಕಾರಿ ನೌಕರರ ರಕ್ಷಣೆಗೆ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿದ ಸರ್ಕಾರಿ ನೌಕರರು ಜಿಲ್ಲಾದ್ಯಂತ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಇಂಥ ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಗರಿಷ್ಠ ಪರಿಹಾರ ಒದಗಿಸಬೇಕು. ಮೃತರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು. ರಾಜ್ಯದಲ್ಲಿ ಇಂಥ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಅದರಲ್ಲೂ ಕಂದಾಯ ಇಲಾಖೆ ನೌಕರರ ಮೇಲೆ ಹಲ್ಲೆ ಸಾಮಾನ್ಯವಾಗಿದೆ. ಇದರಿಂದ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕಾರವಾರದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಜಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಕಂದಾಯ ಇಲಾಖೆ ನೌಕರರ ಸಂಘದ ರಮೇಶ ಎಂ.ಬರ್ಗಿ, ಪರಶುರಾಮ ನಾಯಕ, ಶ್ರೀಧರ ನಾಯ್ಕ ಇದ್ದರು.

    ಶಿರಸಿಯಲ್ಲಿ ಮನವಿ ಸಲ್ಲಿಕೆ ವೇಳೆ ತಾಲೂಕು ಘಟಕದ ಅಧ್ಯಕ್ಷ ಶ್ರೀಕೃಷ್ಣ ಕಾಮಕರ, ಮಹಮದ್ ರಿಯಾಜ್, ಅರುಣ ನಾಯ್ಕ, ಸೀತಾರಾಮ ನಾಯ್ಕ, ನಾರಾಯಣ ನಾಯ್ಕ, ಕಿರಣ ನಾಯ್ಕ, ವಿದ್ಯಾ ಹಳದೀಪುರ, ಕಿರಣಕುಮಾರ, ರಮೇಶ ಹೆಗಡೆ ಇತರರಿದ್ದರು.

    ಸಿದ್ದಾಪುರದಲ್ಲಿ ಪ್ರತಿಭಟನೆ ವೇಳೆ ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಸಂಘದ ಕಾರ್ಯದರ್ಶಿ ಎನ್.ಐ. ಗೌಡ, ಉಪಾಧ್ಯಕ್ಷ ಜಿ.ಐ. ನಾಯ್ಕ, ಸುಧೀರ್ ಎಸ್., ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್., ಯಶವಂತ ಅಪ್ಪಿನಬೈಲ್, ತೇಜಸ್ವಿ ನಾಯ್ಕ, ಸತೀಶ ಹೆಗಡೆ, ನಾಗರಾಜ ನಾಯ್ಕಡ, ರವಿ ಗೌಡರ್, ಡಿ.ಎಂ. ನಾಯ್ಕ ಇತರರಿದ್ದರು.

    ಕುಮಟಾದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ಘಟಕದ ಸಂಘದ ಅಧ್ಯಕ್ಷ ಬಿ.ಡಿ. ನಾಯಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಉಲ್ಲಾಸ ನಾಯ್ಕ, ಖಜಾಂಚಿ ನಾಗರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿ ಎನ್.ಆರ್.ನಾಯ್ಕ, ರಾಜ್ಯಪರಿಷತ್ ಸದಸ್ಯ ಬಿ.ಜಿ. ನಾಯಕ, ಸದಸ್ಯರಾದ ಕಿರಣ ನಾಯ್ಕ, ಗುರುದಾಸ ಮಹಾಲೆ, ದಯಾನಂದ ನಾಯ್ಕ, ಟಿ.ಎಸ್. ಗಾಣಿಗ, ಆಶಾ ನಾಯ್ಕ, ಶಿವಾನಂದ ಇತರರು ಇದ್ದರು.

    ಹಳಿಯಾಳದಲ್ಲಿ ನಡೆದ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಪ್ರಶಾಂತ ನಾಯಕ, ಪದಾಧಿಕಾರಿಗಳಾದ ಕಿಶೋರ ನಾಯ್ಕ, ರುದ್ರಮೂರ್ತಿ ತಳವಾರ, ಈರಯ್ಯಾ ಮಠಪತಿ, ಮುಕ್ತುಂ ಹುಸೇನ, ಕೆ.ಜಿ.ಗಾಟೆ, ಅನಿಲ ಪರ್ಬತ, ಎ.ಐ.ಖಾಜಿ, ಮಹೇಶ ಇಡಗುಂದಿ, ವಿಜಯಕುಮಾರ ನಾಗನೂರ, ವಿ.ಎಸ್.ಬೊರೆಕರ, ಚಂದ್ರಶೇಖರ ಕುಂಬಾರ ಇದ್ದರು, ಗ್ರೇಡ್ 2 ತಹಸೀಲ್ದಾರ ರತ್ನಾಕರ, ಕೃಷಿ ಸಹಾಯಕ ನಿರ್ದೇಶಕ ಪಿ.ಐ.ಮಾನೆ, ಶಿರಸ್ತೆದಾರ ಅನಂತ ಚಿಪ್ಪಗಟ್ಟಿ ಉಪಸ್ಥಿತರಿದ್ದರು.

    ಯಲ್ಲಾಪುರದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಸಂಘದ ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ ಹೊಸ್ಕೇರಿ, ಪ್ರಮುಖರಾದ ಸುಬ್ರಹ್ಮಣ್ಯ ಭಟ್ಟ, ಶರಣಪ್ಪ ಗಜನೂರು, ಜ್ಯೋತಿ ನಾಯ್ಕ, ನಾಗೇಂದ್ರ ಬೋವಿವಡ್ಡರ್, ಸಂತೋಷ ಬಂಟ ಇತರರಿದ್ದರು.

    ಭಟ್ಕಳದಲ್ಲಿ ನೌಕರರ ಸಂಘದ ಅಧ್ಯಕ್ಷ ಅನಂತ ಭಟ್ಕಳ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಸುಧೀರ ಗಾಂವಕರ, ರಾಜ್ಯಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಕಾರ್ಯದರ್ಶಿ ಮೋಹನ ನಾಯ್ಕ, ಖಜಾಂಚಿ ವಿದ್ಯಾ ಹೆಗಡೆ, ಪ್ರವೀಣ ಪಿ., ಉದಯ ತಲ್ವಾರ ಇತರರು ಇದ್ದರು.

    ಮುಂಡಗೋಡದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ತಾಲೂಕು ಘಟಕ, ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಮತ್ತು ಕಂದಾಯ ಇಲಾಖೆ ನೌಕರರ ಸಂಘದವರು ಶಿರಸಿ ಉಪ ವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಗೋಣಿಬಸಪ್ಪ, ರಾಘವೇಂದ್ರ ಗಿರಡ್ಡಿ, ವಿಜಯ ಶೆಟ್ಟೆಪ್ಪನವರ, ರಾಘವೇಂದ್ರ ಪಾಟೀಲ, ದಯಾನಂದ ನಾಯ್ಕ, ವೀಣಾ ರಾಠೋಡ, ಎಸ್.ಎಫ್. ಪಾಟೀಲ, ಸುಭಾಸ ಡೋರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts