More

    ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ

    ಬಂಕಾಪುರ: ಅತ್ಯುತ್ತಮ ಸೇವೆ ನೀಡುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಕೊಡಮಾಡುವ ಕಾಯಕಲ್ಪ ಪ್ರಶಸ್ತಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಭಾಜನವಾಗಿದೆ.

    ಸ್ವಚ್ಛತೆ, ಶೌಚಗೃಹ ವ್ಯವಸ್ಥೆ, ರೋಗಿಗಳ ಆರೈಕೆ, ಸಿಬ್ಬಂದಿ ಸ್ಪಂದನೆ, ಕುಡಿಯುವ ನೀರು, ಉದ್ಯಾನ ಮತ್ತಿತರ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿಗೆ ರಾಜ್ಯದ 34 ಜಿಲ್ಲಾಸ್ಪತ್ರೆಗಳು, 154 ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಮತ್ತು ಪ್ರಾಥಮಿಕ ಆಸ್ಪತ್ರೆಗಳು ಸ್ಪರ್ಧಿಸಿದ್ದವು. ಇವುಗಳಲ್ಲಿ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರ ಶೇ. 89.7ರಷ್ಟು ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ 37ನೇ ಸ್ಥಾನ ಪಡೆದು ನಗದು ಬಹುಮಾನಕ್ಕೆ ಪಾತ್ರವಾಗಿದೆ.

    ಈ ಮೊದಲು ಆರೋಗ್ಯ ಇಲಾಖೆ ಮೂರು ಸದಸ್ಯರಂತೆ ಸುಮಾರು 27 ಬಾಹ್ಯ ಮೌಲ್ಯಮಾಪನ ತಂಡಗಳನ್ನು ರಚಿಸಿತ್ತು. ಈ ಮೂಲಕ ರಾಜ್ಯದಲ್ಲಿನ ಜಿಲ್ಲಾ, ತಾಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಕ್ಷೆ ನಡೆಸಲಾಗಿತ್ತು. ಕರೊನಾ ಸೋಂಕಿನ ಭಯದ ಮಧ್ಯೆಯೂ ಉತ್ತಮ ಸೇವೆ ಸಲ್ಲಿಸಿದ ವೈದ್ಯರು, ನರ್ಸ್​ಗಳು ಮತ್ತು ಸಿಬ್ಬಂದಿ ಪರಿಶ್ರಮದಿಂದ ಈಗ ಆರೋಗ್ಯ ಕೇಂದ್ರ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಕೇಂದ್ರದ ವೈದ್ಯರಾದ ಡಾ. ಮನೋಜಕುಮಾರ ನಾಯ್ಕ, ಡಾ. ಸಲೀಮ ಇಳಕಲ್, ಡಾ. ಅನಿಲ ಹೊಸಳ್ಳಿ, ಗೀತಾ ಪಾಟೀಲ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts