More

    ಬಂಕಾಪುರ ದುರ್ಗಾದೇವಿ ಜಾತ್ರೆ ರದ್ದು

    ಬಂಕಾಪುರ: ಸರ್ಕಾರದ ಹೊಸ ಕೋವಿಡ್ ನಿರ್ಬಂಧ ಜಾರಿ ಹಿನ್ನೆಲೆಯಲ್ಲಿ ಪಟ್ಟಣದ ಐತಿಹಾಸಿಕ ತೋಪಿನ ದುರ್ಗಾದೇವಿ ಜಾತ್ರೆಯ ುನ್ನು ರದ್ದು ಪಡಿಸಿ, ಕೋವಿಡ್ ಮಾರ್ಗಸೂಚಿ ಅನ್ವಯ ಕೇವಲ ಧಾರ್ವಿುಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.

    ಜ. 4ರಿಂದ ಜ. 11ರ ವರೆಗೆ ಎಂಟು ದಿನಗಳ ಕಾಲ ಅತಿ ವಿಜೃಂಭಣೆಯಿಂದ ನಡೆಯುವ ಜಾತ್ರೆಗೆ ಮಂಗಳವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ಆದರೆ, ಮಂಗಳವಾರ ಸಂಜೆ ಸರ್ಕಾರ ಹೊಸ ನಿರ್ಬಂಧ ಜಾರಿ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳು, ಜಾತ್ರಾ ಸಮಿತಿಯವರು ಜಾತ್ರೆ ಬಂದ್ ಮಾಡಿ ಕೇವಲ ಧಾರ್ವಿುಕ ಕಾರ್ಯಕ್ರಮ ಆಚರಿಸಲು ತೀರ್ಮಾನ ತೆಗೆದುಕೊಂಡರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಂಗಡಿಕಾರರು, ಈಗಾಗಲೇ ನಾವು ಸಾವಿರಾರು ರೂ. ಖರ್ಚು ಮಾಡಿಕೊಂಡು ದೂರದ ಊರುಗಳಿಂದ ಬಂದಿದ್ದೇವೆ. ಈಗ ದಿಢೀರನೇ ಜಾತ್ರೆ ರದ್ದು ಮಾಡಿದರೆ ಏನು ಮಾಡಬೇಕು. ದಯವಿಟ್ಟು ಜಾತ್ರೆಯಲ್ಲಿ ಅಂಗಡಿ ಹಚ್ಚಲಿಕ್ಕೆ ಅವಕಾಶ ಮಾಡಿ ಕೊಡುವಂತೆ ವಿನಂತಿಸಿದರು.

    ಜಾತ್ರಾ ಸಮಿತಿ ಸದಸ್ಯ ಉಮೇಶ ಅಂಗಡಿ ಮಾತನಾಡಿ, ಸರ್ಕಾರ ನಿರ್ಬಂಧ ಹಾಕಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ಮೂರು ದಿನಗಳ ಕಾಲ ನಡೆಯಬೇಕಾಗಿದ್ದ ರಾಜ್ಯ ಮಟ್ಟದ ಬಯಲು ಜಂಗೀ ಕುಸ್ತಿಗಳನ್ನು ಸಹ ರದ್ದು ಮಾಡಿದ್ದೇವೆ. ಕೊವೀಡ್ ಸೋಂಕಿನ ಪ್ರಮಾಣ ದಿನ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಯಾರೂ ಅಂಗಡಿ ಮುಂಗಟ್ಟುಗಳನ್ನು ಹಾಕಬಾರದು ಎಂದು ವಿನಂತಿಸಿದರು.

    ಪಿಎಸ್​ಐ ಪರಸಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪಿಡಿಒ ಈರಣ್ಣ ಗಾಣಿಗೇರ, ಸೋಮನಗೌಡ ಪಾಟೀಲ, ಬಾಪುಗೌಡ್ರ ಪಾಟೀಲ, ಪ್ರತಾಪಸಿಂಗ ಟೋಪಣ್ಣವರ, ಗದಿಗೆಯ್ಯ ಹಿರೇಮಠ, ಫಕೀರಗೌಡ್ರ ಕಾಡಪ್ಪಗೌಡ್ರ, ಬಸವರಾಜ ಕೂಲಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts