More

    ಫ್ಲೈ ಓವರ್ ನಿರ್ವಣಕ್ಕೆ ಬಾಲಬಾಧೆ

    ಆನಂದ ಅಂಗಡಿ ಹುಬ್ಬಳ್ಳಿ

    ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಇನ್ನೂ ಶುರುವಾಗಿಲ್ಲ. ಅದಾಗಲೇ ವಿಘ್ನಗಳು ಶುರುವಾಗಿವೆ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ ಹಾಗೂ ಹರಿಯಾಣ ಮೂಲದ ಜಾಂಡು ಕನ್​ಸ್ಟ್ರಕ್ಸನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಗುತ್ತಿಗೆ ಸಂಸ್ಥೆಯೊಂದಿಗೆ ಬಿಆರ್​ಟಿಎಸ್ ಅಧಿಕಾರಿಗಳು ತಗಾದೆ ತೆಗೆಯುತ್ತಿದ್ದಾರೆ.

    ಚನ್ನಮ್ಮ ವೃತ್ತ ಕೇಂದ್ರವಾಗಿಟ್ಟುಕೊಂಡು ಸ್ಟೇಶನ್ ರಸ್ತೆ, ಕುಸುಗಲ್ಲ ರಸ್ತೆ, ಇಂದಿರಾ ಗಾಜಿನ ಮನೆ ಎದುರು, ಗೋಕುಲ ರಸ್ತೆ ಹಾಗೂ ಧಾರವಾಡ ರಸ್ತೆಯ ಒಟ್ಟು 3.9 ಕಿಮೀ ಉದ್ದದ ಮಾರ್ಗದಲ್ಲಿ ಫ್ಲೈ ಓವರ್ ನಿರ್ವಣಗೊಳ್ಳಲಿದೆ. ಸ್ಟೇಶನ್ ರಸ್ತೆಯಿಂದ ಧಾರವಾಡ ರಸ್ತೆಯಲ್ಲಿ ಬಿಆರ್​ಟಿಎಸ್ ಮಾರ್ಗ ಇದೆ. ಈ ರಸ್ತೆಯಲ್ಲಿ ಪಿಲ್ಲರ್​ಗಳ ನಿರ್ವಣಕ್ಕಾಗಿ ಮಣ್ಣು ಪರೀಕ್ಷೆ ಮಾಡುವ ಉದ್ದೇಶದಿಂದ ಗುತ್ತಿಗೆ ಸಂಸ್ಥೆ ತಗ್ಗು ತೋಡುತ್ತಿದೆ. ಈ ಮಣ್ಣಿನ ಪರೀಕ್ಷೆಯ ವರದಿಯನ್ನಾಧರಿಸಿಯೇ ಫ್ಲೈ ಓವರ್​ನ ವಿನ್ಯಾಸ ಹಾಗೂ ಇತರ ಸಂಗತಿಗಳು ನಿರ್ಧಾರಗೊಳ್ಳಲಿವೆ.

    ಈ ಮಧ್ಯೆ ಬಿಆರ್​ಟಿಎಸ್ ಹಿರಿಯ ಅಧಿಕಾರಿಗಳು, ತಮ್ಮ ಸಂಸ್ಥೆಗೆ ಸೇರಿದ ರಸ್ತೆಯಲ್ಲಿ ತಗ್ಗು ತೋಡುತ್ತಿದ್ದಂತೆ ತಗಾದೆ ತೆಗೆದಿದ್ದಾರೆ. ತಗ್ಗು ತೋಡುವ ಮೊದಲು ತಮ್ಮ ಇಲಾಖೆಯಿಂದ ಯಾವುದೇ ಪರವಾನಿಗೆ ತೆಗೆದುಕೊಂಡಿಲ್ಲ. ತಗ್ಗು ತೋಡಿದ್ದರಿಂದ ತಮ್ಮ ಆಸ್ತಿಗೆ ಧಕ್ಕೆಯಾಗಿದ್ದು, ಇದಕ್ಕಾಗಿ ಪರಿಹಾರದ ಮೊತ್ತ ಕೊಡಬೇಕೆಂದು ಹಠ ಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ.

    ಲ್ಯಾಮಿಂಗ್ಟನ್ ರಸ್ತೆಯಲ್ಲಿ ಮಣ್ಣು ಪರೀಕ್ಷೆಗಾಗಿ ತಗ್ಗು ತೋಡುತ್ತಿದ್ದ ಸಂದರ್ಭದಲ್ಲಿ ಬಿಆರ್​ಟಿಎಸ್ ಅಧಿಕಾರಿಗಳು ಗುತ್ತಿಗೆ ಸಂಸ್ಥೆಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಉಪನಗರ ಠಾಣೆಗೂ ತೆರಳಿದ್ದರು ಎನ್ನಲಾಗಿದೆ. ಆದರೆ, ಬಿಆರ್​ಟಿಎಸ್ ರಸ್ತೆ ಹಳೆಯ ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಆ ರಸ್ತೆಯನ್ನು ಬಿಆರ್​ಟಿಎಸ್​ಗೆ ಲೀಸ್ ಆಗಲಿ ಅಥವಾ ಮಾರಾಟವಾಗಲಿ ಮಾಡಿಲ್ಲ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ವ್ಯಾಪ್ತಿಯ ರಸ್ತೆಯಲ್ಲಿಯೇ ಫ್ಲೈ ಓವರ್ ನಿರ್ವಣಗೊಳ್ಳುತ್ತಿದೆ. ಆದರೂ, ಬಿಆರ್​ಟಿಎಸ್ ಅಧಿಕಾರಿಗಳು ತಮ್ಮ ಆಸ್ತಿ ಹಾಳಾಗುತ್ತಿದೆ ಎಂಬಂತೆ ಫ್ಲೆ ೖ ಓವರ್ ನಿರ್ವಣಕ್ಕೆ ತಗಾದೆ ತೆಗೆಯುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಹೇಳಿದ್ದಾರೆ. ಹೀಗಾಗಿ, ಪ್ರಕರಣ ದಾಖಲಾಗುವುದಕ್ಕೆ ತಡೆಬಿದ್ದಿದೆ.

    ಫ್ಲೈ ಓವರ್ ಕಾಮಗಾರಿ ಪ್ರಾರಂಭಗೊಳ್ಳುವ ಮುಂಚೆಯೇ ಕರೆದಿದ್ದ ಸಭೆಯಲ್ಲಿ, ‘ಬಿಆರ್​ಟಿಎಸ್ ರಸ್ತೆಯಲ್ಲಿಯೇ ನಿರ್ಮಾಣ ಕಾಮಗಾರಿ ನಡೆಯಲಿದೆ. ಬಿಆರ್​ಟಿಎಸ್ ಬಸ್​ಗಳು ಫ್ಲೈಓವರ್ ಕೆಳಗೆ ಸಂಚರಿಸಿದರೆ, ಇತರ ವಾಹನಗಳು ಫ್ಲೈ ಓವರ್ ಮೇಲೆ ಸಂಚರಿಸುತ್ತವೆ’ ಎಂಬ ಮಾಹಿತಿಯನ್ನು ಜನಪ್ರತಿನಿಧಿಗಳು ನೀಡಿದ್ದರು. ಆ ಸಮಯದಲ್ಲಿ ಸುಮ್ಮನಿದ್ದ ಬಿಆರ್​ಟಿಎಸ್ ಅಧಿಕಾರಿಗಳು, ಮಣ್ಣು ಪರೀಕ್ಷೆಗೆ ತಗ್ಗು ತೋಡುತ್ತಿದ್ದಂತೆಯೆ ಕ್ಯಾತೆ ಶುರು ಮಾಡಿದ್ದಾರೆ. ಈಗಲೂ ಇಂತಹ ಕಿರಿಕಿರಿಗಳು ಮುಂದುವರಿದಿವೆ ಎನ್ನಲಾಗಿದೆ.

    ಬಿಆರ್​ಟಿಎಸ್ ಬಸ್​ಗಳು ಸಂಚರಿಸುವ ರಸ್ತೆಯಲ್ಲಿ ತಗ್ಗು ತೆಗೆದರೆ ಬಸ್​ಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ. ಫ್ಲೈ ಓವರ್ ನಿರ್ವಣದ ಗುತ್ತಿಗೆ ಸಂಸ್ಥೆ ಎಲ್ಲ ಸೌಲಭ್ಯಗಳನ್ನು ಮೊದಲಿನಂತೆ ನಿರ್ವಿುಸಿಕೊಡುವುದಾಗಿ ಹೇಳಿದೆ. ಇದೀಗ ಯಾವುದೇ ಸಮಸ್ಯೆ ಇಲ್ಲ.
    ಕೃಷ್ಣ ಬಾಜಪೇಯಿ, ಎಂಡಿ ಬಿಆರ್​ಟಿಎಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts