More

    ಫೆಬ್ರವರಿ 7ರಿಂದ ಐತಿಹಾಸಿಕ ಸಾಗರ ಮಾರಿಕಾಂಬಾ ಜಾತ್ರೆ: 9 ದಿನ ವಿಜೃಂಭಣೆಯ ಉತ್ಸವ

    ಸಾಗರ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ 2023ರ ಫೆಬ್ರವರಿ 7ರಿಂದ 15ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾಹಿತಿ ನೀಡಿದರು.
    ಸಾಗರದ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯಿಂದ ಶುಕ್ರವಾರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜಾತ್ರೆಗೆ ಮುಹೂರ್ತ ಇರಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತ್ರೆ ಸಂಬಂಧ ಪೂಜೆ ಸಲ್ಲಿಸಿ ಸುದ್ದಿಗಾರರಿಗೆ ವಿವರಣೆ ನೀಡಿದರು.
    2022ರ ಡಿ.27ರ ಮಂಗಳವಾರ ಮರ ಕಡಿಯುವ ಶಾಸ್ತ್ರ ಪೋತರಾಜನ ನೇತೃತ್ವದಲ್ಲಿ ನಡೆಯಲಿದೆ. ಜ.31ರಂದು ಜಾತ್ರೆಗೆ ಅಂಕೆ ಹಾಕುವ ಕಾರ್ಯಕ್ರಮ ಇರುತ್ತದೆ. ಫೆ.7ರಂದು ಮಾರಿಕಾಂಬಾ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ. ಅಂದು ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ಇರುತ್ತದೆ. ಫೆ.11ರಂದು ಗಾವುಗುರಿ ಹಿಡಿಯುವ ಶಾಸ್ತ್ರ ನಡೆಯಲಿದೆ. ಫೆ.15ರ ಬುಧವಾರ ರಾತ್ರಿ ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ ನೆರವೇರಲಿದ್ದು, ಆ ದಿನ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಉತ್ಸವ ಮೂರ್ತಿ ಸಂಚರಿಸಿ ಅಮ್ಮನವರನ್ನು ವನಕ್ಕೆ ಬಿಡಲಾಗುತ್ತದೆ ಎಂದು ಹೇಳಿದರು.
    ಫೆ.18ರಂದು ಶಿವರಾತ್ರಿ ಅಂಗವಾಗಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಲಿದ್ದು, ಫೆ. 21ರಂದು ಅಂಕೆ ತೆಗೆಯುವ ಶಾಸ್ತ್ರ ಇರುತ್ತದೆ. 9 ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಗೆ ಈಗಿನಿಂದಲೇ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts