More

    ಫುಟ್​ಬಾಲ್ ಮೈದಾನ ಲೋಕಾರ್ಪಣೆ

    ಗದಗ: ಗದಗ-ಬೆಟಗೇರಿ ನಗರದ ಮುಳಗುಂದ ರಸ್ತೆಯಲ್ಲಿ ಕನಕ ಭವನದ ಹತ್ತಿರ ಸಮಾಜ ಕಲ್ಯಾಣ ಇಲಾಖೆ, ಶಾಸಕರ ಅನುದಾನ ಹಾಗೂ ನಗರಸಭೆ ಅಭಿವೃದ್ಧಿ ಅನುದಾನದಡಿ 84 ಲಕ್ಷ ರೂ.ವೆಚ್ಚದಲ್ಲಿ ನಿರ್ವಣಗೊಂಡಿರುವ ನೂತನ ಫುಟ್​ಬಾಲ್ ಟರ್ಫ್ ಮೈದಾನ ಗುರುವಾರ ಲೋಕಾರ್ಪಣೆಗೊಂಡಿತು.

    ಕರ್ನಾಟಕ ರಾಜ್ಯ ಫುಟ್​ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎಚ್. ಹ್ಯಾರಿಸ್ ಸಾಂಕೇತಿಕವಾಗಿ ಚಂಡನ್ನು ಕ್ರೀಡಾಪಟುಗಳಿಗೆ ಪಾಸ್ ಮಾಡುವ ಮೂಲಕ ಆರಂಭಿಕ ಪಂದ್ಯಕ್ಕೆ ಚಾಲನೆ ನೀಡಿದರು.

    ವಿಶ್ವ ಫುಟ್​ಬಾಲ್ ಸಂಸ್ಥೆ ಫಿಫಾ ಅನುಮೋದಿಸಿರುವ ಆಸ್ಟ್ರೋ ಟರ್ಫ್ ನಿಯಮಾನುಸಾರ ತರಬೇತಿ ಪಂದ್ಯಾವಳಿಗಾಗಿ ನಿರ್ವಿುಸಿರುವ ಫುಟ್​ಬಾಲ್ ಮೈದಾನ 48 ಮೀಟರ್ ಉದ್ದ, 30 ಮೀಟರ್ ಅಗಲವಿದೆ. ಕ್ರೀಡಾಪಟುಗಳು ಬಿದ್ದರೂ ಗಾಯವಾಗದಂತೆ ಕ್ರೀಡಾಂಗಣಕ್ಕೆ ಸಿಲಿಕಾ ಸ್ಯಾಂಡ್ ಮತ್ತು ಆಸ್ಟ್ರೋ ಟರ್ಫ್ ಬಳಸಲಾಗಿದೆ. ಅಲ್ಲದೇ, ಆಡುವ ವೇಳೆ ಮೈದಾನದಿಂದ ಚೆಂಡು ಹೊರಹೋಗದಂತೆ ಸುತ್ತಲೂ 25 ಅಡಿ ಎತ್ತರದ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಮೇಲ್ಛಾವಣಿಗೆ ನೆಟ್ ಹೊದಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಶಾಸಕ ಎಚ್.ಕೆ. ಪಾಟೀಲ, ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಜಿಪಂ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಡಾ.ಆನಂದ ಕೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ನಗರಸಭೆ ಮಾಜಿ ಸದಸ್ಯರಾದ ಎಂ.ಸಿ. ಶೇಖ್, ಅನಿಲ ಗರಗ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್ ಮುಧೋಳ ಮತ್ತಿತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts