More

    ಫಲಾನುಭವಿಗಳು ಶಿಸ್ತಿನಿಂದ ನಗದು ಪಡೆಯಲಿ

    ಧಾರವಾಡ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನ್​ಧನ್ ಖಾತೆಗಳಿಗೆ ತಲಾ 500 ರೂ. ಪಾವತಿ ಮಾಡಲಾಗುತ್ತಿದೆ. ಫಲಾನುಭವಿಗಳು ಶಿಸ್ತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಹಣ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕಿಮ್್ಸ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕು ತಡೆಗೆ ಸರ್ಕಾರಿಗೆ ಆಸ್ಪತ್ರೆಗಳು ಶ್ರಮಿಸುತ್ತಿವೆ. ಉಳಿದ ಸಣ್ಣಪುಟ್ಟ ಕಾಯಿಲೆಗಳು ಹಾಗೂ ತುರ್ತು ಚಿಕಿತ್ಸೆ ಸೇವೆಯನ್ನು ಖಾಸಗಿ ಆಸ್ಪತ್ರೆಗಳು ಒದಗಿಸಬೇಕು. ಈ ಕುರಿತು ರ್ಚಚಿಸಲು ಏ. 4ರಂದು ಅವಳಿನಗರದ ಖಾಸಗಿ ವೈದ್ಯರ ಸಭೆ ನಡೆಸಲಾಗುವುದು ಎಂದರು.

    21 ದಿನಗಳ ಲಾಕ್​ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾಗುವ ಜನರಿಗೆ ನೆರವು ನೀಡಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರುತ್ತಿವೆ. ಅವರು ನೀಡುವ ಆಹಾರ ಧಾನ್ಯ, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸ್ವೀಕರಿಸಿ, ಅವರು ಹೇಳಿದ ಸ್ಥಳಗಳಿಗೆ ವಿತರಿಸಲು ಅಗತ್ಯ ಏರ್ಪಾಡು ಮಾಡಬೇಕು. ಬಡತನ ರೇಖೆಗಿಂತ ಕೆಳಗಿರುವ ಅರ್ಹ ಪಡಿತರ ಚೀಟಿದಾರರರಿಗೆ ತೊಂದರೆಯಾಗದಂತೆ ಆಹಾರ ಧಾನ್ಯ ವಿತರಿಸಬೇಕು. ಒಟಿಪಿ ಆಧಾರಿತ ಸೇವೆ ಸಾಧ್ಯವಾಗದಿದ್ದರೆ ಸರಳ ರೀತಿಯಲ್ಲಿ ಸಾಂರ್ದಭಿಕವಾಗಿ ಪರಿಹಾರ ಕಂಡುಕೊಂಡು ಧಾನ್ಯಗಳನ್ನು ಪೂರೈಸಬೇಕು ಎಂದರು.

    ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್, ಜಿಪಂ ಸಿಇಒ ಡಾ.ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ್, ಆಹಾರ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ, ಡಾ. ಲಕ್ಷ್ಮೀಕಾಂತ, ಡಿಎಚ್​ಒ ಡಾ.ಯಶವಂತ ಮದಿನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಇತರರು ಇದ್ದರು.

    ಅಗತ್ಯ ವಸ್ತುಗಳ ಪೂರೈಕೆಗೆ ವೆಬ್​ಸೈಟ್ ಲೋಕಾರ್ಪಣೆ: ಲಾಕ್​ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗಾಗಿ ಜನರು ಹಾಗೂ ವ್ಯಾಪಾರಿಗಳು ಒಂದೇ ವೇದಿಕೆ ಮೂಲಕ ಜಿಲ್ಲಾಡಳಿತವನ್ನು ಸಂರ್ಪಸಿ ಅದರ ನೆರವು ಪಡೆಯುವಂತೆ ಜಿಲ್ಲಾಡಳಿತ ರೂಪಿಸಿರುವ ನೂತನ ಡಿಡಿಡಿ.ಠ್ಠಟಟಟ್ಟಠಿಛಜಚ್ಟಡಿಚಛ.ಜ್ಞಿ ವೆಬ್​ಸೈಟ್ ಅನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಲೋಕಾರ್ಪಣೆಗೊಳಿಸಿದರು.

    ಲಾಕ್​ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯ ಸೇವೆ ಒದಗಿಸಲು ಜಿಲ್ಲೆಯೊಂದು ವೆಬ್​ಸೈಟ್ ಆರಂಭಿಸಿರುವ ಕಾರ್ಯದಲ್ಲಿ ಧಾರವಾಡ ಮೊದಲ ಸ್ಥಾನದಲ್ಲಿದೆ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಹು-ಧಾ ಬಿಆರ್​ಟಿಎಸ್ ಜನರಲ್ ಮ್ಯಾನೇಜರ್ ಗಣೇಶ ರಾಠೋಡ್, ಶಗುಫ್ತಾ ಮುಲ್ಲಾ, ಮಂಜುನಾಥ, ಇತರರ ತಂಡ ವೆಬ್​ಸೈಟ್​ಅನ್ನು ರೂಪಿಸಿ, ನಿರ್ವಹಿಸುತ್ತಿದೆ.

    ಕೊಳಚೆ ಪ್ರದೇಶಗಳಲ್ಲಿ ಉಚಿತ ಹಾಲು ವಿತರಣೆ: ಧಾರವಾಡ ಹಾಲು ಒಕ್ಕೂಟಗಳಲ್ಲಿ ಹೆಚ್ಚುವರಿ ಸಂಗ್ರಹ ಆಗುತ್ತಿರುವ ಹಾಲನ್ನು ಅಧಿಸೂಚಿತ ಹಾಗೂ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳಲ್ಲಿ ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಇಲ್ಲಿನ ಭಾವಿಕಟ್ಟಿ ಪ್ಲಾಟ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಶುಕ್ರವಾರ ಚಾಲನೆ ನೀಡಿದರು. ಅವಳಿನಗರದ ಕೊಳಚೆ ಪ್ರದೇಶಗಳಲ್ಲಿನ ಸುಮಾರು 37 ಸಾವಿರ ಕುಟುಂಬಗಳು, 5 ಸಾವಿರಕ್ಕೂ ಅಧಿಕ ವಲಸೆ ಕಾರ್ವಿುಕರಿಗೆ, ಇಟ್ಟಿಗೆ ಭಟ್ಟಿ ಕಾರ್ವಿುಕರಿಗೆ ಹಾಲು ವಿತರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಧಾರವಾಡ ಹಾಲು ಒಕ್ಕೂಟ ನಿತ್ಯ 25 ಸಾವಿರ ಲೀಟರ್ ಹಾಲು ಪೂರೈಸಲಿದೆ. ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಅಧಿಕಾರಿಗಳು ಇದ್ದರು.

    ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿರುವವರಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕಿಮ್ಸ್​ಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರ ಒತ್ತಡ ಕಡಿಮೆ ಮಾಡಲು ಎಸ್​ಡಿಎಂ ಆಸ್ಪತ್ರೆಯಲ್ಲೂ ಫಿವರ್ ಕ್ಲಿನಿಕ್ ಹಾಗೂ ಗಂಟಲು ದ್ರವ ಸಂಗ್ರಹ ಕಾರ್ಯ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ. | ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

    ಸರ್ಕಾರದ ವಿವಿಧ ಹಾಸ್ಟೆಲ್​ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿರುವ ಜನರಿಗೆ ಧಾರ್ವಿುಕ ಮುಖಂಡರಿಂದ ಹಾಗೂ ಮನೋ ವೈದ್ಯರಿಂದ ಆಪ್ತ ಸಮಾಲೋಚನೆ ಏರ್ಪಡಿಸಲು ಕ್ರಮಕೈಗೊಳ್ಳಲಾಗಿದೆ. | ದೀಪಾ ಚೋಳನ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts