More

    ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ ಭೂಮಿ ರಕ್ಷಿಸಬೇಕಿದೆ

    ಚಿತ್ರದುರ್ಗ: ಪರಿಸರ ಹಾಗೂ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ಬಳಕೆ ನಿತ್ಯದ ಜೀವನದಲ್ಲಿ ಅನಗತ್ಯವಾಗಿ ಹೆಚ್ಚಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಬೇಸರ ವ್ಯಕ್ತಪಡಿಸಿದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಸರ್ಕಾರಿ ಕಲಾ ಕಾಲೇಜು ಆಶ್ರಯದಲ್ಲಿ ಆಡುಮಲ್ಲೇಶ್ವರ ಮೃಗಾಲಯದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ಲಾಸ್ಟಿಕ್‌ನಿಂದಾಗಿ ಸಮುದ್ರದಲ್ಲಿನ ಅಪರೂಪದ ಜೀವರಾಶಿಗಳೂ ಅಳವಿನ ಅಂಚಿಗೆ ತಲುಪುತಿದ್ದು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಭೂಮಿ ರಕ್ಷಣೆಗೆ ಪಣ ತೊಡಬೇಕಿದೆ ಎಂದರು.
    ಭೂಮಿ ದಿನಾಚರಣೆ ಧ್ಯೇಯವಾಕ್ಯ ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬುದಾಗಿದೆ. 2040ರ ವೇಳೆಗೆ ಜಾಗತಿಕವಾಗಿ ಶೇ.60 ಪ್ಲಾಸ್ಟಿಕ್ ಬಳಕೆ ಕಡಿತದ ಉದ್ದೇಶವಿದ್ದು, ಪ್ಲಾಸ್ಟಿಕ್‌ನ್ನು ಕ್ರಮೇಣ ಸಂಪೂರ್ಣವಾಗಿ ಪ್ರಪಂಚದಿಂದಲೇ ನಿರ್ಮೂಲನೆ ಮಾಡಬೇಕಿದೆ. ಭೂಮಿ ವಿನಾಶ ತಪ್ಪಿಸಲು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಗೆ ಮಿತಿ ಹಾಕಿಕೊಳ್ಳಬೇಕಿದೆ ಎಂದು ತಿಳಿಸಿದರು.
    ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಜಾಗೃತಿ ಹೊಂದಿರಬೇಕು ಎಂದರು.
    ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ನ್ಯಾಯಾಧೀಶರಾದ ಚೈತ್ರಾ, ಉಜ್ವಲಾ ವೀರಣ್ಣ ಸಿದ್ದಣ್ಣವರ್, ನೇಮಚಂದ್ರ, ಅನಿತಾಕುಮಾರಿ, ಆರ್.ಸಹನಾ, ಗೀತಾಕುಂಬಾರ್, ಡಿಸಿಎಫ್ ಟಿ.ರಾಜಣ್ಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಅರಣ್ಯಾಧಿಕಾರಿಗಳಾದ ಚಂದ್ರಣ್ಣ, ಎಚ್.ಉಷಾರಾಣಿ, ಎನ್.ವಾಸುದೇವ, ಸಹಾಯಕ ಪ್ರಾಧ್ಯಾಪಕ ಡಾ.ವಿ.ಪ್ರಸಾದ್ ಮತ್ತಿತರರು ಇದ್ದರು.

    *ಕೋಟ್
    ಅತೀ ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದ ರಕ್ತದಲ್ಲೂ ಮೈಕ್ರೋ ಪ್ಲಾಸ್ಟಿಕ್ ಸೇರಿಕೊಳ್ಳುತ್ತಿದೆ. ನಮ್ಮಗಳ ಮನೆಯಿಂದಲೇ ಪರಿಸರ ಸಂರಕ್ಷಣೆ ಕಾಳಜಿ ಪ್ರಾರಂಭವಾಗ ಬೇಕಿದೆ.
    ಟಿ.ರಾಜಣ್ಣ, ಡಿಸಿಎಫ್ ಚಿತ್ರದುರ್ಗ

    (ಸಿಟಿಡಿ 22 ಫಾರೆಸ್ಟ್)
    ಭೂಮಿ ದಿನಾಚರಣೆ ಅಂಗವಾಗಿ ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ‌್ಯಕ್ರಮವನ್ನು ನ್ಯಾಯಾಧೀಶೆ ಕೆ.ಬಿ.ಗೀತಾ ಉದ್ಘಾಟಿಸಿದರು. ಆರ್.ಸಹನಾ, ಗೀತಾ ಕುಂಬಾರ್, ಅನಿತಾಕುಮಾರಿ, ಉಜ್ವಲಾ ವೀರಣ್ಣ ಸಿದ್ದಣ್ಣವರ್, ಚೈತ್ರಾ, ಕೆಂಪರಾಜು, ಎಂ.ವಿಜಯ್, ನೇಮಚಂದ್ರ, ವೈ.ತಿಪ್ಪೇಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts