More

    ಪ್ರೇಮಿಗಳ ದಿನಾಚರಣೆ ತಡೆಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

    ಬೆಳಗಾವಿ: ಹಲವು ವರ್ಷಗಳಿಂದ ಭಾರತದಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುತ್ತ ಪಾಶ್ಚಿಮಾತ್ಯ ದೇಶಗಳಲ್ಲಿರುವ ಅಂಧಾನುಕರಣೆ ಇಲ್ಲೂ ಅನುಸರಿಸಲಾಗುತ್ತಿದೆ. ಈ ಬಾರಿ ‘ವ್ಯಾಲೆಂಟೈನ್ ಡೇ’ ಆಚರಿಸುವುದಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಫೆ. 14ರಂದು ಪ್ರೇಮಿಗಳ ದಿನ ಆಚರಿಸುವುದು ಅನೈತಿಕತೆ ಮತ್ತು ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಿಮಾತ್ಯರ ಈ ವ್ಯಾಲೆಂಟೈನ್ ಡೇ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ ದಿನವನ್ನಾಗಿ ಆಚರಿಸುವುದು ಖೇದಕರ ಸಂಗತಿಯಾಗಿದೆ. ಆ ದಿನ ಪಾರ್ಟಿ ನೆಪದಲ್ಲಿ ಮದ್ಯಪಾನ, ಡ್ರಗ್ ಸೇವನೆಯಂಥ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲ ಸಮೀಕ್ಷೆ ಪ್ರಕಾರ ಗರ್ಭಪಾತ ಅಧಿಕವಾಗುತ್ತಿದೆ. ಇಂಥ ಅನೇಕ ದುಷ್ಪರಿಣಾಮ ತಂದೊಡ್ಡುವ ಪ್ರೇಮಿಗಳ ದಿನ ರದ್ದು ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಮಿಲನಾ ಪವಾರ, ಪ್ರಚಿಜಿ ಹಳದನಕರ, ಸವಿತಾ ಬೊಂಗಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts