More

    ಪ್ರಾರಂಭಗೊಳ್ಳದ ಕಡಲೆ ಖರೀದಿ ಕೇಂದ್ರ

    ರೋಣ: ಸತತ ಬರ, ನೆರೆಯಿಂದ ತತ್ತರಿಸಿದ್ದ ತಾಲೂಕಿನ ರೈತರಿಗೆ ಕೊನೆ ಗಳಿಗೆಯಲ್ಲಿ ಕೈ ಹಿಡಿದ ಹಿಂಗಾರು ವಾಣಿಜ್ಯ ಬೆಳೆಯಾದ ಕಡಲೆ ಕಾಳಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾ ಗಿದ್ದಾರೆ. ಈ ಮಧ್ಯ ಸರ್ಕಾರ ಬೆಂಬಲಬೆಲೆ ಘೊಷಣೆ ಮಾಡಿದ್ದರೂ, ತಾಲೂಕಿನ ಯಾವುದೇ ಗ್ರಾಮ ಗಳಲ್ಲಿಯೂ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ವಾಗದಿರು ವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

    ಕೇಂದ್ರ ಸರ್ಕಾರ 2017-18ನೇ ಸಾಲಿನಲ್ಲಿ ಬೆಂಬಲಬೆಲೆ ಯೋಜನೆಯಡಿ ಗುಣಮಟ್ಟದ ಕಡಲೆಗೆ ಕ್ವಿಂಟಾಲ್​ಗೆ 4,400 ರೂ. ಘೊಷಿಸಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 4,875 ರೂ. ಬೆಂಬಲ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿ ಫೆ. 12ರಿಂದ ಖರೀದಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ತಾಲೂಕಿನ ಯಾವುದೇ ಭಾಗದಲ್ಲಿಯೂ ಇಲ್ಲಿಯವರೆಗೂ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ.

    ತಾಲೂಕಿನಾದ್ಯಂತ ಕಡಲೆ ಕಟಾವು ಕಾರ್ಯ ಪ್ರಾರಂಭವಾಗಿ ತಿಂಗಳು ಕಳೆದರೂ ಖರೀದಿ ಕೇಂದ್ರ ಪ್ರಾರಂಭವಾಗದಿರುವುದು ರೈತರ ನಿದ್ದೆಗೆಡಿಸಿದೆ. ಏಕೆಂದರೆ ಈಗಾಗಲೇ ದಲ್ಲಾಳಿಗಳು ಕ್ವಿಂಟಾಲ್​ಗೆ 3,800 ರೂ.ನಂತೆ ಶೇ. 50ಕ್ಕಿಂತ ಹೆಚ್ಚು ಕಡಲೆಯನ್ನು ಖರೀದಿಸಿ ಶೇಖರಿಸಿಟ್ಟುಕೊಂಡಿದ್ದಾರೆ.

    ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರದಿಂದ ರೈತರಿಗೆ ಯಾವುದೇ ಅನುಕೂಲವಾಗುವ ಸಾಧ್ಯತೆಗಳು ಕಡಿಮೆ. ಏಕೆಂದರೆ, ಫೆ. 12ರಿಂದ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸುವುದಾಗಿ ಹೇಳಿದ್ದ ಅಧಿಕಾರಿಗಳು ಇಲ್ಲಿಯವರೆಗೂ ತಾಲೂಕಿನ ಯಯಾವ ಭಾಗದಲ್ಲೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಇನ್ನು ಖರೀದಿ ಕೇಂದ್ರ ಪ್ರಾರಂಭವಾದ ನಂತರ ರೈತರು ಆನ್​ಲೈನ್ ಮೂಲಕ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆಯಿದೆ. ಇದನ್ನೆಲ್ಲ ಗಮನಿಸದೇ ಬೆಂಬಲ ಬೆಲೆ ಖರೀದಿ ಕೇಂದ್ರವು ದಲ್ಲಾಳಿ ಗಳಿಗೆ ಅನುಕೂಲಕರವಾಗುವ ಸಾಧ್ಯತೆಗಳು ಹೆಚ್ಚಿವೆ.

    | ಪ್ರಭು ಮೇಟಿ ತಾಪಂ ಸದಸ್ಯ

    ಇಲ್ಲಿಯವರೆಗೂ ತಾಲೂಕಿನಲ್ಲಿ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗದಿರುವ ಬಗ್ಗೆ ಮಾಹಿತಿ ಇದೆ. ಪ್ರಾರಂಭವಾದ ನಂತರ, ಮೊದಲಿಗೆ ರೈತರು ಆನ್​ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಅದರಂತೆ ಒಂದು ಎಕರೆಗೆ ಮೂರು ಕ್ವಿಂಟಾಲ್ ಖರೀದಿಸಲಾಗುವುದು. ಮೂರರಿಂದ ನಾಲ್ಕು ಎಕರೆ ಜಮೀನಿರುವ ರೈತರಿಂದ 9 ರಿಂದ 10 ಕ್ವಿಂಟಾಲ್ ಖರೀದಿಸಲಾಗುತ್ತದೆ. ಅದು ಗುಣಮಟ್ಟದ್ದಾಗಿದ್ದರೆ ಮಾತ್ರ ಖರೀದಿಸಲಾಗುವುದು.

    | ಎಸ್.ಬಿ. ಡೊಕ್ಕನವರ

    ಮಾರ್ಕೆಟಿಂಗ್ ಸೊಸೈಟಿ ಶಾಖಾ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts