More

    ಪ್ರಶ್ನಿಸುವ ಹಕ್ಕು ಕಸಿದ ಕೇಂದ್ರ ಸರಕಾರ

    ಯಾದಗಿರಿ: ಸಂಸತ್ ದಾಳಿಯನ್ನು ಖಂಡಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದ ವಿಪಕ್ಷದ 146 ಸಂಸದರ ಅಮಾನತು ಖಂಡಿಸಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ನಿಂದ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಇತ್ತೀಚೆಗೆ ದೆಹಲಿಯ ನೂತನ ಸಂಸತ್ ಭವನದಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಕೆಲವರು ಒಳನುಸುಳಿ ಆತಂಕ ಸೃಷ್ಠಿಸಿದ್ದಾರೆ. ಈ ಘಟನೆ ಇಡೀ ದೇಶವನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಭಾರಿ ಭದ್ರತಾ ಲೋಪವಾಗಿದ್ದು, ಇದಕ್ಕೆ ಹೊಣೆ ಯಾರು ಎಂದು ವಿಪಕ್ಷಗಳು ಪ್ರಶ್ನಿಸಿದರೆ, ಸಭಾಧ್ಯಕ್ಷರು ಸಂಸದರನ್ನು ಅನರ್ಹಗೊಳಿಸುವ ಮೂಲಕ ನಮ್ಮ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಳುವ ಪಕ್ಷಕ್ಕೆ, ಕೇಳುವ ಪಕ್ಷ ಇರಲೇಬೇಕು. ಅಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವ ಸರಕಾರವಿದೆ. ಲಕ್ಷಾಂತರ ಮತದಾರರು ಸಂಸದರನ್ನು ಆರಿಸಿ, ಲೋಕಸಭೆಗೆ ಕಳಿಸುತ್ತಾರೆ. ಭದ್ರತಾ ಲೋಪದ ಬಗ್ಗೆ ಧ್ವನಿ ಎತ್ತುವುದು ಬಿಜೆಪಿ ಸರಕಾರಕ್ಕೆ ಬೇಡ ಎಂದು ತೋರಿದಂತಿದೆ ಎಂದರು.
    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಕೇಂದ್ರ ಸರಕಾರ ಹಾಗೂ ಸ್ಪೀಕರ್ ನಡೆಯನ್ನು ಖಂಡಿಸಿದರು. ದಾಳಿಕೋರರಿಗೆ ಪಾಸ್ ಕೊಟ್ಟ ಪ್ರತಾಪಸಿಂದ ಅರ್ಹ, ದಾಳಿ ಪ್ರಶ್ನೆ ಮಾಡಿದ ಸಂಸದರು ಅನರ್ಹ ಎಂದು ಸರಕಾರ ಭಾವಿಸಿದಂತಿದೆ.ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿದೆ. ದೇಶದ 140 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts