More

    ಪ್ರಶಸ್ತಿ ಬಂದಿವೆ, ಮನೆ-ನೆಲೆಯಿಲ್ಲ

    ಹುಬ್ಬಳ್ಳಿ : ‘ಗುಬ್ಬಿ ವೀರಣ್ಣ ಸೇರಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ. ಆದರೆ, ಸ್ವಂತ ಮನೆಯಿಲ್ಲ, ನೆಲೆಯೂ ಇಲ್ಲ. ಕುಂದಗೋಳ ತಾಲೂಕಿನ ಇನಾಂಕೊಪ್ಪದ ಮಗಳ ಮನೆಯಲ್ಲಿಯೇ ವಾಸವಿರುವ ನನಗೆ, ಸರ್ಕಾರದಿಂದ ಮಾಸಾಶನ ಬಿಟ್ಟರೆ ಬೇರ್ಯಾವ ನೆರವೂ ಸಿಕ್ಕಿಲ್ಲ…’

    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗಭೂಮಿ ಕಲಾವಿದ ಪ್ರಕಾಶ ಕಡಪಟ್ಟಿ ಅವರು ಹೀಗೆ ಹೇಳಿ ಕಣ್ಣೀರಿಟ್ಟರು.

    18 ವರ್ಷದವನಿದ್ದಾಗಲೇ ರಂಗಭೂಮಿಗೆ ಪದಾರ್ಪಣೆ ಮಾಡಿದೆ. ಚನ್ನಪ್ಪ ಚನಗೌಡ ನಾಟಕ ರಚಿಸಿ ಪ್ರಯೋಗಿಸಿದೆ. ಹುಬ್ಬಳ್ಳಿಯಲ್ಲಿಯೇ 2 ಸಾವಿರಕ್ಕೂ ಹೆಚ್ಚು ಪ್ರಯೋಗ ಕಂಡದ್ದು ದಾಖಲೆ ಇದೆ. ಕೆಎಎಸ್ ಪ್ರಶ್ನೆ ಪತ್ರಿಕೆಯಲ್ಲಿ (2019) ನನ್ನ ಬಗೆಗೆ ಪ್ರಶ್ನೆ ಕೇಳಲಾಗಿತ್ತು. ಕಲಬುರಗಿ ವಿವಿಯಿಂದ ನನ್ನ ಕುರಿತು ಡಾಕ್ಟರೇಟ್ ಪದವಿಗೆ ಅಧ್ಯಯನ ನಡೆಸಲಾಗುತ್ತಿದೆ. ವಯಸ್ಸಾಗುವವರೆಗೆ ಕಲೆಯನ್ನೇ ನಂಬಿ ಜೀವನ ನಡೆಸಿದೆ. ಇಳಿವಯಸ್ಸಿನಲ್ಲಿ ಕಣ್ಣ ಮುಂದೆ ಪ್ರಶಸ್ತಿ ಬಿಟ್ಟರೆ ಬೇರೆ ಯಾವೊಂದು ಸವಲತ್ತೂ ಸಿಕ್ಕಿಲ್ಲ. ಮಗಳ ಮನೆಯೂ ಮಳೆಗೆ ಬಿದ್ದಿದೆ. ಎಲ್ಲರೂ ಮೂಲೆಯಲ್ಲಿಯೇ ವಾಸ ಮಾಡುವಂಥ ದುಸ್ಥಿತಿ ಬಂದಿದೆ. ಪ್ರಶಸ್ತಿಗಳು ಹೊಟ್ಟೆ ತುಂಬಿಸುವುದಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ, ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಾಯಹಸ್ತ ಚಾಚಬೇಕೆಂದು ಕೋರಿದರು.ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದರಾಜ ಕುಂದಗೋಳ, ಧಾರವಾಡ ಜಿಲ್ಲಾಧ್ಯಕ್ಷ ವಿರೂಪಾಕ್ಷ ಕಳ್ಳಿಮನಿ, ಪುತ್ರಿ ವೀಣಾ ಹಿರೇಮಠ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts