More

    ಪ್ರಶಸ್ತಿ ದೊರೆಯಲು ಗಿಡ ಮರಗಳೇ ಕಾರಣ

    ಹಳಿಯಾಳ: ನಾನು ಪ್ರೀತಿಯಿಂದ ಬೆಳೆಸಿದ ಗಿಡಮರಗಳೇ ಇಂಥ ದೊಡ್ಡ ಪ್ರಶಸ್ತಿಯನ್ನು ತಂದು ಕೊಟ್ಟಿವೆ ಎಂದು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡಾ ಹೇಳಿದರು.

    ಮುರ್ಕವಾಡದ ಚೈತನ್ಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಎರಡು ವರ್ಷ ಮಗುವಾಗಿದ್ದಾಗಲೇ ತಂದೆ ಕಳೆದುಕೊಂಡ ನಾನು, ಪರಿಸರದ ಮಗುವಾಗಿಯೇ ಬೆಳೆದೆ. ಕೂಲಿ ಮಾಡಿ ಜೀವನ ನಡೆಸಿದೆ. 1 ರೂ. 25 ಪೈಸೆಯ ದಿನಗೂಲಿ ಮಾಡಿ ಅರಣ್ಯ ಇಲಾಖೆಯಲ್ಲಿ 30 ವರ್ಷ ಗಿಡ ನೆಟ್ಟಿದ್ದೆ. ಅನಂತರ ಸ್ವತಃ ಪ್ರೇರಣೆಯಿಂದ ಮೂರು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇನೆ. ಗಿಡಗಳೇ ನನ್ನ ಜೀವನ, ಮರಗಳೇ ನನ್ನ ಉಸಿರು ಎಂದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು.

    ಅಧ್ಯಕ್ಷತೆ ವಹಿಸಿದ್ದ ಇಂಟೇಕ್ ಧಾರವಾಡ ಘಟಕದ ಅಧ್ಯಕ್ಷ ಎಸ್.ಜಿ. ಭಾಗವತ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಗಿಡಮರ ನೆಟ್ಟ ಈ ತಾಯಿ ನಿಜವಾಗಿಯೂ ನಮ್ಮ ಮನೆ ಅಂಗಳದ ತುಳಸಿಯಷ್ಟೇ ಪೂಜ್ಯಳು ಎಂದರು. ಕುಮಾವು ಟ್ರಸ್ಟ್​ನ ಎಸ್.ಸಿ. ದೇಶಪಾಂಡೆ ಮಾತನಾಡಿದರು. ಉದಯ ಕೊಟೂರ, ಕರ್ನಲ್ ಮೋಹನ ಭಟ್, ಸ್ಥಳೀಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ ಮುಕ್ರಿ, ಪ್ರಾಚಾರ್ಯ ಮಂಜುಪ್ರಸಾದ, ಮುಖ್ಯೋಪಾಧ್ಯಾಯ ವೈ.ಜಿ. ಕುರಿ, ಹಳಿಯಾಳ ತಾಲೂಕು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಜೆ.ಡಿ. ಗಂಗಾಧರ, ಸಂಸ್ಥೆಯ ಆಡಳಿತಾಧಿಕಾರಿ ಗುರುನಾಥ ಇನಾಮದಾರ, ಸಮೀಪದ ಕೆ. ಕೆ. ಹಳ್ಳಿ ಮಠದ ಪ್ರೌಢಶಾಲೆಯ ಮಕ್ಕಳು ಇದ್ದರು. ಸ್ಪೂರ್ತಿ ಸಾಸವಿನಹಳ್ಳಿ ತುಳಸಿ ಎಂಬ ಸ್ವರಚಿತ ಕವನ ವಾಚಿಸಿದಳು. ಜ್ಯೋತಿ ಪಾಟೀಲ ಹಾಗೂ ಸೌಜನ್ಯ ಎಂ. ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts