More

    ಪ್ರಶಂಸೆಗೆ ಪಾತ್ರವಾದ ಲಯನ್ಸ್ ಕ್ಲಬ್

    ಗೋಕಾಕ: ಜನಸೇವೆ ಮೂಲಕ ವಿಶ್ವದ ಪ್ರಶಂಸೆಗೆ ಪಾತ್ರವಾದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಲಯನ್ಸ್ ಕ್ಲಬ್ ಪಾತ್ರವಾಗಲು ಪ್ರತಿಯೊಬ್ಬ ಸದಸ್ಯರ ಪ್ರಾಮಾಣಿಕ ಸೇವಾ ಮನೋಭಾವವೇ ಮುಖ್ಯ ಕಾರಣ ಎಂದು ಲಯನ್ಸ್ ಕ್ಲಬ್‌ನ ಗೋವಾ 317ಬಿ ಘಟಕದ 2ನೇ ಉಪ ಜಿಲ್ಲಾ ಪ್ರಾಂತಪಾಲ ಜೈಅಮೋಲ್ ನಾಯಿಕ ಹೇಳಿದರು.

    ಇಲ್ಲಿನ ಡಾಲರ್ಸ್‌ ಕಾಲನಿ ಕ್ಲಬ್ ಹೌಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 2023-2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮಾನವೀಯ ನೆಲೆಗಟ್ಟುಳ್ಳ ಸಂಸ್ಥೆಗೆ ಹೊಸ ಸದಸ್ಯರ ಸೇರ್ಪಡೆ ಎಂಬುದು ಬಹು ಪ್ರಮುಖವಾದ ಹಂತ. ಹೀಗಾಗಿ ಕ್ಲಬ್‌ನ ಸದಸ್ಯರು ಹೊಸ ಸದಸ್ಯರನ್ನು ಕರೆತರುವ ಯತ್ನ ನಿರಂತರವಾಗಿ ನಡೆಯುತ್ತಿರಲಿ ಎಂದರು.

    ಕ್ಲಬ್ ನೂತನ ಅಧ್ಯಕ್ಷರಾಗಿ ಡಾ. ಅಶೋಕ ಪಾಟೀಲ, ಕಾರ್ಯದರ್ಶಿಯಾಗಿ ಎಚ್.ಬಿ.ಪಾಟೀಲ ಮತ್ತು ಕೋಶಾಧಿಕಾರಿಯಾಗಿ ಶಂಕರ ದೊಡಮನಿ ಅವರು ಅಧಿಕಾರ ಸ್ವೀಕರಿಸಿದರು.

    ನೂತನ ಅಧ್ಯಕ್ಷ ಡಾ. ಅಶೋಕ ಎಸ್. ಪಾಟೀಲ ಮಾತನಾಡಿ, ಕ್ಲಬ್ ಸೇರ್ಪಡೆಗೊಂಡು 11 ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಭಾಗ್ಯ ಒದಗಿದೆ. ನನ್ನ ಸೇವಾ ಅವಧಿಯಲ್ಲಿ ವಿನೂತನ ಕಾರ್ಯಚಟುವಟಿಕೆಗಳ ಮೂಲಕ ಕ್ಲಬ್‌ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಹುಮ್ಮಸ್ಸು ಹೊಂದಿದ್ದೇನೆ ಎಂದರು.

    ವೈದ್ಯೆ ಡಾ. ಭಾರತಿ ಕೋಣಿ, ಜಿಲ್ಲಾ ಪದಾಧಿಕಾರಿ ಎಂ.ಬಿ.ಪಾಟೀಲ, ಕಾರ್ಯದರ್ಶಿಗಳಾದ ಕೀರ್ತಿ ನಾಯಿಕ, ಗುರುದೇವ ಸಿದ್ದಾಪೂರಮಠ, ನಿರ್ಗಮಿತ ಅಧ್ಯಕ್ಷ ಡಾ. ಅಶೋಕ ಮುರಗೋಡ, ಚಾರ್ಟರ್ಡ್ ಅಕೌಂಟಂಟ್ ಪುರುಷೋತ್ತಮ ಬಾಫನಾ, ಡಾ. ಅಶೋಕ ಮುರಗೋಡ, ಮುಖ್ಯ ಶಿಕ್ಷಕ ಎಸ್.ಕೆ.ಮಠದ, ಕಾರ್ಯದರ್ಶಿ ಎಚ್.ಬಿ.ಪಾಟೀಲ, ಗಿರೀಶ ಕುಲಕರ್ಣಿ, ಕೃಷ್ಣಶರ್ಮಾ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts