More

    ಪ್ರವರ್ಗ 2ಎ ಮೀಸಲಿಗಾಗಿ ಸರ್ಕಾರಕ್ಕೆ ಒತ್ತಡ  -ಶಾಸಕ ಕೆ.ಎಸ್. ಬಸವಂತಪ್ಪ -ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ

    ದಾವಣಗೆರೆ: ಪ್ರವರ್ಗ 3ಬಿ ಪಟ್ಟಿಯಲ್ಲಿರುವ ಹಡಪದ ಅಪ್ಪಣ್ಣ ಸಮಾಜಕ್ಕೆ 2ಎ ಮೀಸಲು ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
    ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿಜಸುಖಿ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, 2ಎ ವ್ಯಾಪ್ತಿಯಲ್ಲಿ ಸರ್ಕಾರಿ ಸೌಲಭ್ಯಗಳು ದಕ್ಕಿದಲ್ಲಿ ಸಮಾಜ ಅಭಿವೃದ್ಧಿ ಸಾಧಿಸಲಿದೆ ಎಂದರು.
    ಸಮಾಜದ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಹೇಳಿದರು.
    ಹನ್ನೆರಡನೇ ಶತಮಾನದ ವಚನ ಚಳವಳಿ ಚರಿತ್ರಾರ್ಹವಾದುದು. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಇದು ಕಾರಣವಾಯಿತು. ಕಾರಣವಾದವು. ಶೋಷಿತರು, ದಲಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಯಿತು ಎಂದರು.
    ಬಸವಣ್ಣನ ನಂಬಿಕಸ್ಥ ಸಹಾಯಕರಾಗಿದ್ದ ಹಡಪದ ಅಪ್ಪಣ್ಣ ಎಲ್ಲ ಶರಣರ ಪ್ರೀತಿ-ಗೌರವಕ್ಕೆ ಪಾತ್ರರಾಗಿದ್ದರು. ಲೌಕಿಕ ಮತ್ತು ಅಧ್ಯಾತ್ಮಿಕ ಬದುಕಿಗೆ ಲೋಪವಾಗದಂತೆ ನಡೆದುಕೊಂಡಿದ್ದರು ಎಂದು ಸ್ಮರಿಸಿದರು.
    ಅಂಬೇಡ್ಕರ್ ಅವರು ಹೇಳಿದಂತೆ ಸಾಧನೆಗೆ ಶಿಕ್ಷಣವೇ ದಾರಿ. ಸಮಾಜದವರು ಕಾಯಕದ ಜತೆಯಲ್ಲೇ ಹಡಪದ ಅಪ್ಪಣ್ಣನವರ ಆದರ್ಶ ಮೈಗೂಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.
    ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಪಂ ನೀಡಿದ ನಿವೇಶನದ ಪತ್ರವನ್ನು ಶಾಸಕರು, ಸಾನ್ನಿಧ್ಯ ವಹಿಸಿದ್ದ ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಿದರು.
    ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಮುಂಡಗೋಡು, ಜಿಲ್ಲಾಧ್ಯಕ್ಷ ಶಶಿಧರ ಬಸಾಪುರ, ನಾಗರಾಜ್ ಎಚ್.ಮೈಲಾರ, ಗ್ರಾಪಂ ಸದಸ್ಯರಾದ ಕರಿಬಸಪ್ಪ, ನಸ್ರುಲ್ಲಾಖಾನ್, ಬಸವರಾಜ್, ಮಾದಪ್ಪ, ಗ್ರಾಪಂ ಪಿಡಿಒ ಸುಮಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts