More

    ಪ್ರವಚನ ಆಲಿಸುವುದರಿಂದ ಅಜ್ಞಾನ ದೂರ

    ಔರಾದ್: ಪ್ರವಚನಗಳನ್ನು ಆಲಿಸುವುದರಿಂದ ಅಜ್ಞಾನ, ಅಹಂಕಾರ ನಿಮರ್ೂಲನೆ ಆಗುವುದರ ಜತೆಗೆ ಮನಸ್ಸಿಗೆ ಆನಂದ, ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ಭಾಲ್ಕಿ ಹಿರೇಮಠದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

    ಸಂತಪುರ ಅನುಭವ ಮಂಟಪದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕೀರ್ತನೆ, ಭಜನೆ, ಪ್ರವಚನಗಳಂಥ ವಾಣಿಗಳನ್ನು ಆಲಿಸುವುದರಿಂದ ಉತ್ತಮ ದಾರಿಯಲ್ಲಿ ಬದುಕಲು ಸಾಧ್ಯವಾಗುತ್ತದೆ. ಜೀವನದಲ್ಲಿ ಅಹಂಕಾರ ತೊರೆದವನಿಗೆ ಎಂದೂ ಕಷ್ಟ ಬರುವುದಿಲ್ಲ. ಮತ್ತೊಬ್ಬರ ಏಳಿಗೆ ನೋಡಿ ಅಸೂಯೆ ಪಡಬಾರದು. ಸಮಾಜದಲ್ಲಿ ಎಲ್ಲರೊಡನೆ ಉತ್ತಮ ಬಾಂಧವ್ಯದಿಂದ ವ್ಯವಹರಿಸಬೇಕು ಎಂದರು.

    ಭಾಲ್ಕಿ ನಿವೃತ್ತ ಇಂಜಿನಿಯರ್ ವಿಶ್ವನಾಥಪ್ಪ ಬಿರಾದಾರ ಮಾತನಾಡಿ, ಗುರುವಿನ ಉದ್ದೇಶ ಮುಕ್ತಿ ಮತ್ತು ಮಾರ್ಗ ತೋರಿಸುವುದು. ಭಕ್ತಿಯಲ್ಲಿ ಶಕ್ತಿ ಅಡಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು. ವಚನಗಳಿಂದ ಜೀವನ ದಿಕ್ಕು ಬದಲಾಗುತ್ತದೆ ಎಂದು ಹೇಳಿದರು.

    ಪ್ರವಚನಕಾರ ಸಂಜುಕುಮಾರ ಜುಮ್ಮಾ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಶಿವಕುಮಾರ ಘಾಟೆ, ಬಸವರಾಜ ಬಿರಾದಾರ, ಮನೋಹರ ಬಿರಾದಾರ, ಗಣಪತಿ ದೇಶಪಾಂಡೆ, ಶಿವಕುಮಾರ ಹಿರೇಮಠ, ನವೀಲಕುಮಾರ ಉತ್ಕಾರ್, ನಾಗಶೆಟ್ಟೆಪ್ಪ ಬಿಜಲವಾಡೆ, ಹಾವಗಿರಾವ ಶೆಂಬೆಳ್ಳಿ ಇತರರಿದ್ದರು. ಸಂಗಮೇಶ ಬ್ಯಾಳೆ ಸ್ವಾಗತಿಸಿದರು. ಮಾರುತಿ ಗಾದಗೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts