More

    ಪ್ರಯಾಣಿಕರಿಗೆ ಆರ್​ಪಿಐಡಿ ಕಾರ್ಡ್​

    ಬೆಳಗಾವಿ: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಬಸ್​ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿಯ ವಿಭಾಗವು ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್​ ಡಿವೈಸ್​ (ಆರ್​ಪಿಐಡಿ) ಕಾರ್ಡ್​ ಪರಿಚಯಿಸಿದೆ.

    ಸರ್ಕಾರಿ ಸಾರಿಗೆ ಬಸ್​ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರ್​ಪಿಐಡಿ ಕಾರ್ಡ್​ಗಳಿಗೆ ಕನಿಷ್ಠ 10 ರೂ.ದಿಂದ 250 ರೂ.ಗಿಂತ ಹೆಚ್ಚಿನ ರಿಚಾರ್ಜ್​ ಮಾಡಿಸಬಹುದು. ಈ ಕಾರ್ಡ್​ ಎಲೆಕ್ಟ್ರಾನಿಕ್​ ಟಿಕೆಟ್​ ಮಷಿನ್​ನಲ್ಲಿ ಸ್ಕಾ$್ಯನ್​ ಆಗುತ್ತದೆ. ಇದರಿಂದ ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ಸಮಯವೂ ಉಳಿತಾಯವಾಗಲಿದೆ.

    ಚಿಲ್ಲರೆ ಸಮಸ್ಯೆಯೂ ತಪ್ಪಲಿದೆ. ಈ ಕಾರ್ಡ್​ಗಳನ್ನು ಮುಂಗಡವಾಗಿ ರಿಚಾರ್ಜ್​ ಮಾಡಿಸಿಕೊಂಡರೆ ಶೇ.10ರಷ್ಟು ಹಣ ಬೋನಸ್​ ಸಿಗಲಿದೆ. ಬೆಳಗಾವಿ ನಗರದ ಕೇಂದ್ರ ಬಸ್​ ನಿಲ್ದಾಣದಲ್ಲಿ ಮಂಗಳವಾರ ಶಾಸಕ ಅಭಯ ಪಾಟೀಲ ಆರ್​ಪಿಐಡಿ ಕಾರ್ಡ್​ ಬಿಡುಗಡೆಗೊಳಿಸಿ ಮಾತನಾಡಿ, ಸ್ಮಾರ್ಟ್​ಸಿಟಿ ಬೆಳಗಾವಿಯಲ್ಲಿ ಸಾರಿಗೆ ಸಂಸ್ಥೆ ಸ್ಮಾರ್ಟ್​ ಸೇವೆ ಒದಗಿಸಲು ಮುಂದಾಗಿರುವುದು ಸಂತಸದ ಸಂಗತಿ. ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕೇಂದ್ರ ಕಚೇರಿ ಅಂಕಿಸಂಖ್ಯಾಧಿಕಾರಿ ಮಹಾಂತೇಶ ಕಪಲಿ ಮಾತನಾಡಿ, ಪ್ರಾಯೋಗಿಕವಾಗಿ ಸಿಬಿಟಿಯಿಂದ ಅನಗೋಳ, ವಡಗಾವಿ ಹಾಗೂ ಯಳ್ಳೂರು ಮಾರ್ಗದ ಬಸ್​ಗಳಲ್ಲಿ ವಿನೂತನ ಸೇವೆ ಪರಿಚಯಿಸಲಾಗುತ್ತಿದೆ. ಸದ್ಯ ಕೇಂದ್ರ ಬಸ್​ ನಿಲ್ದಾಣದಲ್ಲಿ ಕಾರ್ಡ್​ ಒದಗಿಸಲಾಗುವುದು ಎಂದರು. ಹುಬ್ಬಳ್ಳಿ ಕೇಂದ್ರ ಕಚೇರಿ ವ್ಯವಸ್ಥಾಪಕಿ ವಿಜಯಶ್ರೀ ನರಗುಂದ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ.ನಾಯಕ, ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ, ಸುರತಾ ಅಧಿಕಾರಿ ಬಿ.ಡಿ.ಗುರಿಕಾರ, ಅನಂತ ಶಿರಗುಪ್ಪಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts