More

    ಪ್ರಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಿದ ತೃಪ್ತಿ ಇದೆ


    ಯಾದಗಿರಿ: ಗ್ರಾಮೀಣ ಅಕುಶಲ ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ನರೇಗಾ ಯೋಜನೆಯಡಿ ಸವಲತ್ತುಗಳನ್ನು ಪ್ರಾಮಾಣಿ, ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ನೀಡುವಲ್ಲಿ ಸಲ್ಲಿಸಿದ ಸರ್ಕಾರಿ ಸೇವೆ ತಮಗೆ ತೃಪ್ತಿ ನೀಡಿದೆ ಎಂದು ಚಂದ್ರಶೇಖರ ಪವಾರ ತಿಳಿಸಿದರು.

    ಸುರಪುರ ತಾಪಂಗೆ ನೂತನ ಇಒ ಆಗಿ ವರ್ಗಾವಣೆಯಾದ ಪ್ರಯುಕ್ತ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಭೂಮಿಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ನರೇಗಾದದಡಿ ತಾಲೂಕಿನಲ್ಲಿ ಮಳೆ ನೀರು ಸಂರಕ್ಷಣೆಗೆ ಜಲಶಕ್ತಿ ಕಾಮಗಾರಿ ಕೃಷಿಹೊಂಡ, ಬಹುಕಮಾನು ತಡೆಗೋಡೆ, ಮಳೆನೀರು ಕೋಯ್ಲು, ಸಾರ್ವಜನಿಕ ಕಲ್ಯಾಣಿ ಜೀರ್ಣೋದ್ಧಾರ ಇಂಥ ಅನೇಕ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ್ದೇನೆ ಎಂದರು.

    ಗ್ರಾಮೀಣ ಭಾಗದ ರೈತರಿಗೆ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಅಕುಶಲ ಕೆಲಸ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ಮನಸ್ಸಿಗೆ ತೃಪ್ತಿ ನೀಡಿದೆ. ಸರ್ಕಾರಿ ಸೇವೆಗೆ ಸೇರಿದ ಮೇಲೆ ಜನಪರ ಯೋಜನೆ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅರ್ಹ ಜನರಿಗೆ ತಲುಪಿಸಿದಾಗ ಮನಸ್ಸಿಗೆ ಖುಷಿ ಸಿಗುತ್ತದೆ ಎಂದು ಹೇಳಿದರು.

    ತಾಪಂ ಇಒ ಬಸವರಾಜ ಶರಭೈ ಮಾತನಾಡಿ, ಪವಾರ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾಗಿದ್ದ ಅವಯಲ್ಲಿ ತಮಗೆ ವಹಿಸಿದ ಕೆಲಸ ಪಾರದರ್ಶಕ ನಿಸ್ವಾರ್ಥ ಭಾವನೆಯಿಂದ ನಿರ್ವಹಿಸಿ ಪಂಚಾಯಿತಿ ಸಿಬ್ಬಂದಿ ಮೆಚ್ಚುಗೆ ಪಡೆಯುವ ಜತೆ ಜನರಲ್ಲಿ ತಮ್ಮದೆ ಪ್ರಬಾವ ಬೀರಿದ್ದರು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts