More

    ಪ್ರದೀಪ್ ಸಾವಿಗೆ ನ್ಯಾಯ ಕೊಡಿಸಿ

    ಕೊಪ್ಪ: ಆಟೋ ಚಾಲಕ ಪ್ರದೀಪ್ ಗೌಡ ಸಾವಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಬಜರಂಗದಳ, ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಮೃತಪಟ್ಟು 29 ದಿನವಾದರೂ ಸಾವಿನ ಕಾರಣ ತಿಳಿದಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೀಪಕ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ನ್ಯಾಯಕ್ಕೆ ಆಗ್ರಹಿಸಿದ್ದರು. ಸೆ.15ರ ಒಳಗೆ ಸಾವಿನ ಬಗ್ಗೆ ನಿಖರವಾದ ಕಾರಣ ಇಲಾಖೆ ನೀಡಬೇಕು ಎಂದು ಒತ್ತಾಯಿಸಿ ಗಡುವು ನೀಡಿದ್ದರು. ಆದರೆ ಇಲಾಖೆ ಸ್ಪಷ್ಟ ಕಾರಣ ನೀಡದಿದ್ದರಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಎಸ್ಪಿ ಬಂದು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಎಸ್ಪಿ ಬಾರದಿದ್ದರಿಂದ ಅರಳೀಕಟ್ಟೆಯ ಬಳಿ ಹೋದ ಕಾರ್ಯಕರ್ತರ ಪಟ್ಟಣದ ಮುಖ್ಯರಸ್ತೆಯನ್ನು ಗಂಟೆಗಟ್ಟಲೆ ಬಂದ್ ಮಾಡಿದರು. ಸಂಜೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಹೋಗಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ತೀವ್ರಗೊಳಿಸಿದರು. ಕೆಸವೆಯ ಸ್ತ್ರೀಶಕ್ತಿ ಸಂಘದವರು ಪ್ರತಿಭಟನೆಗೆ ಬೆಂಬಲ ನೀಡಿದರು.

    ಪ್ರದೀಪ್ ಗೌಡ ಸಾವಿನ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನೆಪ ಹೇಳುತ್ತಿದೆ. ಈವರೆಗೂ ಸಾವಿನ ಸತ್ಯಾಂಶ ಜನರಿಗೆ ತಿಳಿಸಲು ಸಾಧ್ಯವಾಗಿಲ್ಲ. ಎಫ್​ಎಸ್​ಎಲ್ ವರದಿ ಬರಬೇಕು ಎಂದು ಹೇಳುತ್ತ ಬಂದಿದ್ದೀರ. ಇಂತಹ ನೆಪ ಹೇಳಬೇಡಿ ಎಂದು ಆಕ್ರೋಶ ಹೊರ ಹಾಕಿದರು.

    ಅನ್ಯಕೋಮಿನ ಕೈವಾಡ ಶಂಕೆ ಪೊಲೀಸ್ ಇಲಾಖೆ ಮೇಲೆ ಗೌರವ ಹೊಂದಿದ್ದೇವೆ. ಆದರೆ ಇಲಾಖೆ ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಪ್ರದೀಪ್ ಸಾವಿನ ಕಾರಣ ಕೇಳಿ ನಾಲ್ಕನೇ ಬಾರಿ ನಿಮ್ಮ ಮುಂದೆ ಬರುತ್ತಿದ್ದೇವೆ. ಆದರೂ ಸ್ಪಂದಿಸುತ್ತಿಲ್ಲ. ಮೇಲಿನ ಅಧಿಕಾರಿಗಳಿಗೆ ಸಾವಿನ ಕಾರಣದ ಗಂಭೀರತೆ ಅರಿವಿಲ್ಲ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಆರ್.ಡಿ.ಮಹೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರದೀಪ್ ಮೃತದೇಹವನ್ನು ಗಮನಿಸಿದಾಗ ಸಹಜ ಸಾವಲ್ಲ ಎಂದು ಹೇಳಿದ್ದೆವು. ಈಗಾಲೂ ಅದನ್ನೇ ಹೇಳುತ್ತಿದ್ದೇವೆ. ಇದರಲ್ಲಿ ಅನ್ಯಕೋಮಿನ ಕೈವಾಡ ಇರುವ ಸಾಧ್ಯತೆ ಇದೆ. ತನಿಖೆ ಮಾಡುವುದನ್ನು ಬಿಟ್ಟು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ ಎಂದು ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts