More

    ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ

    ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಮಾಗಣಗೇರಿಯ ಬೃಹನ್ಮಠದ ಶಿವಾಚಾರ್ಯ ರತ್ನ ಪ್ರಶಸ್ತಿ ಪುರಸ್ಕೃತ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

    ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ- ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ಜಾತ್ರೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮಹಾ ಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಮಹಾ ಪುರಾಣ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾ ಪುರುಷರ ಜೀವನ ಚರಿತ್ರೆ ತಿಳಿಯಲು ಎಲ್ಲರೂ ಮುಂದಾಗಬೇಕು. ಬದುಕಿನಲ್ಲಿ ದಾನ ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ಖಾನಾಪುರದ ಮೌನಯೋಗಿ ಕಲ್ಯಾಣದಯ್ಶ ಸ್ವಾಮೀಜಿ, ಕುರಳಗೇರಾದ ಸಜ್ಜಾದೆ ನಶಿನ್ ದರ್ಗಾದ ಹಜರತ್ ಸೈಯ್ಯದ್ ಹುಸೇನ್ ಬಾಷಾ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಒಡೆಯ ಕಲ್ಯಾಣದಯ್ಯ ವೀರಘಂಟಯ್ಯ ಸ್ವಾಮೀಜಿ, ಚನ್ನಮಲ್ಲಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌಧರಿ, ಹೊನ್ನಳ್ಳಿ ಗ್ರಾಪಂ ಅಧ್ಯಕ್ಷ ಸಂಗನಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಯಂಕನಗೌಡ ಪಾಟೀಲ, ರಾಮರಾವ ದೇಶಮುಖ,ಬಾಪುಗೌಡ ದೇಶಮುಖ, ಮುರಗೆಪ್ಪಗೌಡ ರದ್ದೇವಾಡಗಿ, ಕಾಂಗ್ರೆಸ್ ಮುಖಂಡ ಬಸವರಾಜ ಮಾರಲಭಾವಿ, ಸಾಹೇಪಟೇಲ ಮುರಡಿ ಇದ್ದರು. ಪ್ರವಚನಕಾರ ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಶಿವಯೋಗಿಗಳು ಪ್ರವಚನ ನೀಡಿದರು. ಕಟ್ಟಿಸಂಗಾವಿಯ ವೀರಭದ್ರಯ್ಯ ಹಿರೇಮಠ ಗವಾಯಿಗಳು ಸಂಗೀತ ಸೇವೆಯೊಂದಿಗೆ ಹಾಗೂ ರಮೇಶಕುಮಾರ ಕಟ್ಟಿಸಂಗಾವಿ ತಬಲಾ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts