More

    ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು

    ಬ್ಯಾಡಗಿ: ಆಟಗಾರರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

    ಇಲ್ಲಿನ ಬಿಇಎಸ್​ಎಂ ಕಾಲೇಜ್​ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಕಾಲೇಜ್​ಗಳ ಪ್ರಥಮ ವಲಯ ಹಾಗೂ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಬ್ಯಾಡಗಿ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಖ್ಯಾತಿಯಾದಂತೆ, ಕಬಡ್ಡಿ ಕ್ರೀಡೆಯಲ್ಲೂ ರಾಷ್ಟ್ರಕ್ಕೆ ಆಟಗಾರರನ್ನು ನೀಡಿದೆ. ಕಬಡ್ಡಿ ತಂಡಗಳನ್ನು ಕಟ್ಟಿಕೊಂಡ ಸಾಕಷ್ಟು ಕ್ರೀಡಾಸಕ್ತರಿದ್ದಾರೆ. ಯುವ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ನಾನು ಶಾಸಕನಿದ್ದಾಗ ಕ್ರೀಡಾಸಂಘ, ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ನೀಡಿದ್ದೆ ಎಂದು ತಿಳಿಸಿದರು.

    ಕ.ವಿ.ವಿ. ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಮುಖ್ಯಸ್ಥ ಬಿ.ಎಸ್. ಪಾಟೀಲ ಮಾತನಾಡಿ, ಸರ್ಕಾರ, ಸಂಘ-ಸಂಸ್ಥೆಗಳು ಕಬಡ್ಡಿಗೆ ಉತ್ತೇಜನ ನೀಡುತ್ತಿದೆ. ಯುವಕರು ಇಂತಹ ಅವಕಾಶ ಬಳಸಿಕೊಂಡು ಶೈಕ್ಷಣಿಕ ಅವಧಿಯನ್ನು ಸಾರ್ಥಕಪಡಿಸಿಕೊಳ್ಳಿ. ಕಬಡ್ಡಿ ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ಕಾಲೇಜ್​ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಆಟದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.

    ಪ್ರಾಂಶುಪಾಲ ಕೆ.ಜಿ. ಖಂಡೆಬಾಗೂರು ಅಧ್ಯಕ್ಷತೆ ವಹಿಸಿದ್ದರು. ಎಂ.ಸಿ. ಜೋಷಿ, ಡಾ. ಎಸ್.ಎನ್. ನಿಡಗುಂದಿ, ಡಾ. ಬಿ.ಎಂ.ಪಾಟೀಲ, ಎಲ್.ಎಸ್. ಹರಳಹಳ್ಳಿ, ನಾಗರಾಜ ದೇಸೂರ, ಪ್ರೊ. ಸಿ. ಶಿವಾನಂದಪ್ಪ, ಎಸ್.ಎಚ್. ಕುರಕುಂದಿ, ಶೇಖರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ವಿ.ಎಸ್. ಮೋರಿಗೇರಿ, ಅಂಬಾಲಾಲ ಜೈನ, ಕಿರಣ ಎಂ.ಎಲ್., ಎಸ್.ಎನ್. ಮಾಗೋಡ, ಎಂ.ಜಿ. ನಂದರಗಿ, ಇತರರಿದ್ದರು.

    ಕಬಡ್ಡಿ ಪಂದ್ಯಾವಳಿಗೆ ತೆರೆ: ಬ್ಯಾಡಗಿ ಪಟ್ಟಣದ ಬಿಇಎಸ್​ಎಂ. ಕಾಲೇಜ್ ಆವರಣದಲ್ಲಿ ಎರಡು ದಿನಗಳ ಕಾಲ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಕಾಲೇಜ್​ಗಳ ಪ್ರಥಮ ವಲಯ ಹಾಗೂ ಅಂತರ ವಲಯ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ 24 ವಲಯ ತಂಡಗಳು ಹಾಗೂ 6 ಅಂತರವಲಯ ತಂಡಗಳು ಪಾಲ್ಗೊಂಡಿದ್ದವು.

    ಪ್ರಶಸ್ತಿ ಪಡೆದ ಕಾಲೇಜ್​ಗಳ ವಿವರ: ಏಕವಲಯ ವಿಭಾಗದಲ್ಲಿ ಬಿಇಎಸ್​ಎಂ ಕಾಲೇಜ್ ಬ್ಯಾಡಗಿ ಪ್ರಥಮ, ಶಿವರಾಜ ಕಾಲೇಜು ಧಾರವಾಡ ದ್ವಿತೀಯ, ಗುಡ್ ನ್ಯೂಸ್ ಕಾಲೇಜ್ ಕಲಘಟಗಿ ತೃತೀಯ ಸ್ಥಾನ ಗಳಿಸಿವೆ.

    ಅಂತರ ವಲಯ ಮಟ್ಟ: ಎಸ್​ಕೆವಿಪಿ ಕಾಲೇಜ್ ಹೊಳೆಆಲೂರು ಪ್ರಥಮ, ಬಿಇಎಸ್​ಎಂ ಕಾಲೇಜು ಬ್ಯಾಡಗಿ ದ್ವಿತೀಯ, ಶಿವರಾಜ ಕಾಲೇಜ್ ಧಾರವಾಡ ತೃತೀಯ ಸ್ಥಾನ ಗಳಿಸಿವೆ. ಎಲ್ಲ ಆಟಗಾರರು ಹಾಗೂ ಸ್ಥಳೀಯ ಸಂಘ, ಸಂಸ್ಥೆಗಳು ಹೆಚ್ಚು ಸಹಕಾರ ನೀಡಿವೆ ಎಂದು ಪ್ರಾಂಶುಪಾಲ ಕೆ.ಜಿ. ಖಂಡೆಬಾಗೂರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts