More

    ಪ್ರತಿಯೊಬ್ಬರು ಗಿಡನೆಟ್ಟು ಪೋಷಣೆ ಮಾಡಿ


    ಯಾದಗಿರಿ: ಮನುಷ್ಯನ ಸ್ವಾರ್ಥದ ಲಾಲಸೆಯಿಂದ ಕಾಡುಗಳು ಕಣ್ಮರೆಯಾಗುತ್ತಿದ್ದು, ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪದಂಥ ಸಮಸ್ಯೆಗಳು ಮನುಕುಲಕ್ಕೆ ಬಾಧಿಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

    ಶನಿವಾರ ನಗರದ ಹೊರ ವಲಯದಲ್ಲಿನ ಆರ್ಯಭಟ್ಟ ಇಂಟರ್ನ್ಯಾಶನಲ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿಂದು ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಪರಿಸರ ನಾಶವಾಗುತ್ತಿದೆ. ಇದರಿಂದ ಭೂಮಿಯಲ್ಲಿ ಅಸಮತೋಲನವಾಗಿ ಪ್ರವಾಹ, ಚಂಡಮಾರುತ ಹೀಗೆ ನಾನಾ ಸಮಸ್ಯೆಗಳು ಸೃಷ್ಠಿಯಾಗುತ್ತಿವೆ ಎಂದರು.

    ಹಿಂದೆಲ್ಲ ಭೂಕುಸಿತ, ಭೂಕಂಪನಗಳ ಘಟನೆ ಅಪರೂಪಕ್ಕೆ ಎಂಬಂತೆ ಘಟಿಸುತ್ತಿದ್ದವು. ಆದರೆ ಇದೀಗ ಪ್ರಪಂಚದ ಶೇ.25ರಷ್ಟು ದೇಶಗಳಲ್ಲಿ ಇಂಥ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಕಾರಣ ಪರಿಸರ ನಾಶ. ನಾಗರಿಕ ಸಮಾಜದಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬರು ಒಂದೊಂದು ಗಿಡನೆಟ್ಟು ಪೋಷಣೆ ಮಾಡಬೇಕು. ಅಂದಾಗ ಮಾತ್ರ ಪರಿಸರ ಉಳಿಯಲು ಸಾದ್ಯ ಎಂದು ಸಲಹೆ ನೀಡಿದರು.
    ಜಿಪಂ ಮಾಜಿ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಪ್ರಾಂಶುಪಾಲ ಅರವಿಂದಾಕ್ಷಣ್, ಅರವಿಂದರಡ್ಡಿ, ರಮೇಶ, ಸುನೀಲ್ರಡ್ಡಿ ಪ್ರಭು ಶಂಕರ್ ಕುಲಾಲಿ, ಪಿ.ಸುಜಾತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts