More

    ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು

    ಆಯನೂರು: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರ ರಚನೆಯಾಗಬೇಕಾದರೆ ಮತದಾನ ಕಡ್ಡಾಯವಾಗಿ ಪ್ರತಿಯೊಬ್ಬ ಪ್ರಜೆಯೂ ಮಾಡಬೇಕು. ಜನರಲ್ಲಿ ಮತಯಂತ್ರದ ಬಗ್ಗೆ ತಪ್ಪು ತಿಳಿವಳಿಕೆ ಹೋಗಲಾಡಿಸುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಮತಯಂತ್ರದ ಹಾಗೂ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ನವೀದ್ ಅಹ್ಮದ್ ಹೇಳಿದರು. ಶನಿವಾರ ಆಯನೂರಿನ ವಿನಾಯಕ ವೃತ್ತದಲ್ಲಿ ಕೇಂದ್ರ ಚುನಾವಣಾ ಆಯೋಗ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕೋಹಳ್ಳಿ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರು ಯಾರಿಗೆ ಮತ ಚಲಾಯಿಸುತ್ತಾರೋ ಅದು ಅವರದ್ದೇ ಆಗಿರುತ್ತದೆ. ಇದರಲ್ಲಿ ಗೊಂದಲ ಬೇಡ. ಮತ ಯಂತ್ರದಲ್ಲಿ ಹಸಿರು ಬಟನ್ ಕಂಡ ಮೇಲೆ ಯಂತ್ರದಲ್ಲಿರುವ ಚಿಹ್ನೆಗೆ ನೀಲಿ ಬಟನ್ ಒತ್ತಬೇಕು. ಆ ಚಿಹ್ನೆಯು ಪಕ್ಕದ ಸ್ಕ್ರೀನ್‌ನಲ್ಲಿ 7 ಸೆಕೆಂಡ್ ಕಾಣಿಸುತ್ತದೆ. ಜನರು ಇದನ್ನು ಖಾತ್ರಿ ಮಾಡಿಕೊಳ್ಳಬೇಕು.ಯಾವುದೇ ಆಮಿಷಗಳಿಗೆ ಒಳಗಾಗದೆ ಮೊದಲ ಮತದಾನ ಮಾಡುವವರು ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts