More

    ಪ್ರತಿಯೊಂದು ಮಗು ಪ್ರಜ್ಞಾವಂತರಾಗಿ ಬೆಳೆಯಲಿ

    ಶ್ರೀರಂಗಪಟ್ಟಣ: ಭಾರತದ ಸಂವಿಧಾನ ಅನ್ವಯ ರಾಜ್ಯದ ಪ್ರತಿಯೊಂದು ಮಗುವು ಶಿಕ್ಷಣ ಹಾಗೂ ಸರ್ಕಾರದ ಸೌಲಭ್ಯ ಪಡೆಯುವ ಮೂಲಕ ದೇಶದ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಬೇಕು ಎಂದು ಅಪರ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಹದೇವಪ್ಪ ತಿಳಿಸಿದರು.
    ಪಟ್ಟಣದ ಸಮೀಪದ ಗಂಜಾಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
    ಶಿಕ್ಷಣ ಪಡೆದ ಮಕ್ಕಳು ಬಡತನದಿಂದ ಹೊರಬರುವ ಜತೆಗೆ ಸಮಾಜದಲ್ಲಿ ತನ್ನ ಹಾಗೂ ತನ್ನ ಕುಟುಂಬಗಳ ನಿರ್ವಹಣೆಗೆ ಬದುಕುವ ಮಾರ್ಗ ತಿಳಿಯಬೇಕು. ಜತೆಗೆ ಸಂವಿಧಾನಿಕ, ಸಾಮಾಜಿಕ, ರಾಜಕೀಯ, ಕಾನೂನು ಮತ್ತು ಆಡಳಿತಾತ್ಮಕ ಹಾಗೂ ನ್ಯಾಯಿಕ ವಿಚಾರಗಳನ್ನು ಅರಿತು ಬದುಕುವ ಶಕ್ತಿ ಅವನಲ್ಲಿರುತ್ತದೆ. ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದುಹಾಕಿ ಉತ್ತಮ ಬದುಕು ರೂಪಿಸುವ ನಿಟ್ಟಿನಲ್ಲಿ ದೇಶ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಜತೆಗೆ ಉಚಿತವಾಗಿ ಶಿಕ್ಷಣ, ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ಸೌಲಭ್ಯಗಳನ್ನು ನೀಡಿದೆ. ಇವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಿ. ಕಲಿಯುವ ವಯಸ್ಸಿನ ಮಕ್ಕಳನ್ನು ಯಾರಾದರೂ ಕೂಲಿ ಅಥವಾ ಕಾರ್ಮಿಕ ಬದುಕಿಗೆ ಒಳಪಡಿಸಿದ್ದಲ್ಲಿ ಅಂತಹ ಮಕ್ಕಳ ರಕ್ಷಣೆ ಸರ್ಕಾರ ವಹಿಸಲಿದ್ದು, ನಿಮಗೆ ತಿಳಿದ ದೂರುಗಳಿದ್ದರೆ ಮಕ್ಕಳ ಸಹಾಯವಾಣಿಗೆ ಮುಕ್ತವಾಗಿ ತಿಳಿಸಿ ಎಂದು ಸಲಹೆ ನೀಡಿದರು.

    ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಹನುಮಂತಪ್ಪ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಖಜಾಂಚಿ ವಿನಯ್ ಕೆ.ಆರ್.ಸಾಗರ, ಜಂಟಿ ಕಾರ್ಯದರ್ಶಿ ಕೃಷ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು, ವಕೀಲ ಇಂದ್ರಕುಮಾರ್ ರೆಡ್ಡಿ, ಮುಖ್ಯ ಶಿಕ್ಷಕ ಬಸವರಾಜು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts