More

    ಪ್ರತಿಭಾ ಕಾರಂಜಿ ಸದ್ಬಳಕೆ ಮಾಡಿಕೊಳ್ಳಿ

    ಮಳವಳ್ಳಿ/ಬೆಳಕವಾಡಿ: ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಕ್ರೀಡೆ ಮತ್ತು ವಿವಿಧ ಕ್ಷೇತ್ರಗಳಿಗೆ ಪರಿಚಯಿಸಲು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ತಿಳಿಸಿದರು.


    ತಾಲೂಕಿನ ಬೆಳಕವಾಡಿ ಗ್ರಾಮದ ಸಾರ್ವಜನಿಕ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಹಾಗೂ ಕೌಶಲ ಅಡಕವಾಗಿದ್ದು, ಅವುಗಳನ್ನು ಗುರುತಿಸಿ ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮೆಲ್ಲರ ಜವಬ್ದಾರಿ ಎಂದರು.


    ಈ ಹಿಂದೆ ಮಕ್ಕಳಲ್ಲಿ ಎಂತಹ ಕೌಶಲವಿದ್ದರೂ ಅವರಲ್ಲಿನ ಕಲೆ ಅನಾವರಣಗೊಳಿಸಲು ವೇದಿಕೆ ಸಿಗದೆ ಪ್ರತಿಭೆಗಳು ಕಮರಿ ಹೋಗುತ್ತಿದ್ದವು. ನಮ್ಮಲ್ಲಿ ಎಲ್ಲ ರೀತಿಯ ಕೌಶಲಗಳನ್ನು ಅಡಕವಾಗಿಟ್ಟುಕೊಂಡಿರುವ ಅಪ್ರತಿಮ ಪ್ರತಿಭಾವಂತರಿದ್ದು, ಇದಕ್ಕೆ ಪೂರಕವಾದ ವೇದಿಕೆಯನ್ನು ಸರ್ಕಾರವೇ ನೀಡುತ್ತಿರುವ ಹಿನ್ನೆಲೆಯಲ್ಲಿ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.


    ಪ್ರತಿಭಾ ಕಾರಂಜಿಯಲ್ಲಿ ಹೋಬಳಿ ವ್ಯಾಪ್ತಿಯ 17 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ವೇಷಭೂಷಣ ಸ್ಪರ್ಧೆ ಸೇರಿದಂತೆ 19 ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಶಿಕ್ಷಣ ಇಲಾಖೆ ತಾಲೂಕು ಸಮನ್ವಯಾಧಿಕಾರಿ ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಮುನಿಯಪ್ಪ, ಪ್ರತಿಭಾ, ಕಾಂತರಾಜು, ಪುಷ್ಪಲತಾ, ಮಹೇಶ್, ಮರಿನಂಜಯ್ಯ, ಮಹದೇವಪ್ರಸಾದ್ ಇತರರಿದ್ದರು.

    ಪ್ರಥಮ ಸ್ಥಾನ ಪಡೆದ ಶಾಲೆಗಳು: ಭಾಷಣ ಸ್ಪರ್ಧೆ ಇಂದಿರಾ ಗ್ರಾಮಾಂತರ ಪ್ರೌಢಶಾಲೆ, ಕವಾಲಿ ಮತ್ತು ಭಾಷಣ ಸಾರ್ವಜನಿಕ ಪ್ರೌಢಶಾಲೆ ಬೆಳಕವಾಡಿ, ಧಾರ್ಮಿಕ ಪಠಣ ಜ್ಞಾನಸೂರ್ಯ ಪ್ರೌಢಶಾಲೆ, ರಸಪ್ರಶ್ನೆ ಕರಿಬಸವೇಶ್ವರ ಪ್ರೌಢಶಾಲೆ ಬಿ.ಜಿ.ಪುರ, ಭರತನಾಟ್ಯ, ಛದ್ಮ ವೇಷ, ಹಾಸ್ಯ ಮತ್ತು ಭಾವಗೀತೆ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆ ವಡ್ಡಹಳ್ಳಿ, ರಂಗೋಲಿ ಸರ್ಕಾರಿ ಪ್ರೌಢಶಾಲೆ ಬಿ.ಜಿ.ಪುರ, ಘಜಲ್ ಇಂದಿರಾ ಗ್ರಾಮಾಂತರ ಪ್ರೌಢಶಾಲೆ ಪಂಡಿತಹಳ್ಳಿ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts