More

    ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಕರ್ತವ್ಯ

    ರಟ್ಟಿಹಳ್ಳ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವುದು ಸಮಾಜದ ಪ್ರಮುಖ ಕರ್ತವ್ಯ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಹೇಳಿದರು.

    ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಶಿಕ್ಷಕರ ಪರವಾಗಿ ಪ್ರಾಚಾರ್ಯರನ್ನು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.

    ಕಲಾ ವಿಭಾಗದಲ್ಲಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪುನೀತ ತಿಪ್ಪಣ್ಣನವರ, ಸಹಾನ ಸಿರಗೇರಿ ಮತ್ತು ಕುಡುಪಲಿ ಗ್ರಾಮದ ಜಿ.ಬಿ. ಶಂಕರರಾವ ಕಾಲೇಜಿನ ವಿದ್ಯಾರ್ಥಿ ಉಮೇಶ ಉಜ್ಜಪ್ಪನವರ, ವಾಣಿಜ್ಯ ವಿಭಾಗದಲ್ಲಿ ಪ್ರಿಯದರ್ಶಿನಿ ಕಾಲೇಜ್​ನ ಶಶಿಕಲಾ ತಿಪ್ಪಣ್ಣನವರ, ನೋಬಲ್ ಕಾಲೇಜಿನ ವಿದ್ಯಾ ಹುಲ್ಲತ್ತಿ ಮತ್ತು ಪಟ್ಟಣದ ಸರ್ಕಾರಿ ಪಪೂ ಕಾಲೇಜಿನ ಭಾಗ್ಯ ಹೊಸಳ್ಳಿ ಅವರನ್ನು ಸನ್ಮಾನಿಸಲಾಯಿತು.

    ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಹಸೀಲ್ದಾರ್ ಕೆ. ಗುರುಬಸವರಾಜ, ಶಿಕ್ಷಣ ಸಂಯೋಜಕ ಜಗದೀಶ ಬಳಿಗಾರ, ಶಂಭಣ್ಣ ಗೂಳಪ್ಪನವರ, ದೇವರಾಜ ನಾಗಣ್ಣನವರ, ಸುಭಾಷ ಹದಡೇರ, ಎಸ್.ಬಿ. ಪಾಟೀಲ, ರವೀಂದ್ರ ಮುದಿಯಪ್ಪನವರ, ಗೋಪಾಲ ಮಡಿವಾಳರ, ಗಣೇಶ ವೆರ್ಣಿಕರ, ರಾಮಣ್ಣ ಕೆಂಚ್ಚಳ್ಳೇರ, ಆನಂದಪ್ಪ ಹಾದಿಮನಿ, ತಾ.ಪಂ. ಸದಸ್ಯ ಮಹೇಶ ಗುಬ್ಬಿ, ವಿಜಯ ಮಡಿವಾಳರ, ಮೈಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಕೆ.ವಿ. ವರಹದ, ಜಾಫರ್​ಸಾಬ್ ಖಾಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts